ADVERTISEMENT

ಲೋಕಸಭೆ ಚುನಾವಣೆಗಾಗಿ ಮೈಸೂರಿನಿಂದ ಶಾಯಿ ಪೂರೈಕೆಗೆ ಚಾಲನೆ

ಮೈಸೂರು ಮೈಲ್ಯಾಕ್‌ (ಮೈಸೂರು ಅರಗು ಮತ್ತು ‌ಬಣ್ಣದ ಕಾರ್ಖಾನೆ)ನಿಂದ ಪೂರೈಕೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 20:46 IST
Last Updated 24 ಫೆಬ್ರುವರಿ 2024, 20:46 IST
ಅಳಿಸಲಾಗದ ಶಾಯಿ (ಸಂಗ್ರಹ ಚಿತ್ರ)
ಅಳಿಸಲಾಗದ ಶಾಯಿ (ಸಂಗ್ರಹ ಚಿತ್ರ)   

ಮೈಸೂರು: ಲೋಕಸಭೆ ಚುನಾವಣೆಗಾಗಿ ತಲಾ 10 ಎಂ.ಎಲ್. ಪ್ರಮಾಣದ 26.55 ಲಕ್ಷ ಬಾಟಲಿ ಅಳಿಸಲಾಗದ ಶಾಯಿ ಪೂರೈಸುವಂತೆ ಚುನಾವಣಾ ಆಯೋಗವು ಮೈಸೂರು ಮೈಲ್ಯಾಕ್‌ (ಮೈಸೂರು ಅರಗು ಮತ್ತು ‌ಬಣ್ಣದ ಕಾರ್ಖಾನೆ)ಗೆ ತಿಳಿಸಿದೆ. 

ಈ ಚುನಾವಣೆ ಒಂದರಿಂದಲೇ ಸಂಸ್ಥೆಗೆ ₹ 55 ಕೋಟಿ ವಹಿವಾಟು ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಇಂತಹ ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆ ಇದಾಗಿದೆ. ಒಂದು ಬಾಟಲಿಯಿಂದ 700 ಮತದಾರರ ಬೆರಳಿಗೆ ಗುರುತು ಹಾಕಬಹುದು. ವಿವಿಧ ರಾಜ್ಯಗಳ ಬೇಡಿಕೆಗೆ ಅನುಗುಣವಾಗಿ ಮಾರ್ಚ್ 15ರೊಳಗೆ ಪೂರೈಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಶಾಯಿ ಪೂರೈಸಲು ಈಗಾಗಲೇ ಚಾಲನೆ ನೀಡಲಾಗಿದೆ. ಡಿಸೆಂಬರ್‌ನಲ್ಲಿಯೇ ಬೇಡಿಕೆ ಸಲ್ಲಿಸಿದ್ದನ್ನು ಆಧರಿಸಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಸೇರಿ 10 ರಾಜ್ಯಗಳಿಗೆ ಈಗಾಗಲೇ ರವಾನಿಸಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.