ADVERTISEMENT

ನಗದು ಬಹುಮಾನಕ್ಕೆ ರೈತರಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 7:07 IST
Last Updated 12 ಡಿಸೆಂಬರ್ 2023, 7:07 IST

ಮೈಸೂರು: ಯಳಂದೂರು ತಾಲ್ಲೂಕಿನ ಸುಂದರಮ್ಮ ದುಗ್ಗಹಟ್ಟಿ ವೀರಭದ್ರಪ್ಪ ಪ್ರತಿಷ್ಠಾನದಿಂದ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಉತ್ತಮ ಬೆಳೆ ಬೆಳೆದ ರೈತರನ್ನು ಪ್ರೋತ್ಸಾಹಿಸಲು ನೀಡುವ ನಗದು ಬಹುಮಾನಕ್ಕೆ ಸುತ್ತೂರಿನ ಐಸಿಎಆರ್‌ ಜೆಎಸ್ಎಸ್‌ ಕೃಷಿ ಕೇಂದ್ರದಿಂದ ಅರ್ಜಿ ಆಹ್ವಾನಿಸಲಾಗಿದೆ.

ನಂಜನಗೂಡು ತಾಲ್ಲೂಕಿನಲ್ಲಿ ಭತ್ತ, ಯಳಂದೂರು ತಾಲ್ಲೂಕಿನಲ್ಲಿ ಬಾಳೆ, ಕೊಳ್ಳೇಗಾಲ ತಾಲ್ಲೂಕಿನಲ್ಲಿ ಕಬ್ಬು, ಹನೂರು ತಾಲ್ಲೂಕಿನಲ್ಲಿ ಮುಸುಕಿನ ಜೋಳ, ಚಾಮರಾಜನಗರ ತಾಲ್ಲೂಕಿನಲ್ಲಿ ಟೊಮೆಟೊ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಬೀನ್ಸ್‌ ಅಥವಾ ತರಕಾರಿ ಬೆಳೆಗಳನ್ನು ಗರಿಷ್ಠ ಇಳುವರಿ ಪಡೆದ ಒಬ್ಬ ರೈತ ಅಥವಾ ರೈತ ಮಹಿಳೆಯನ್ನು ಆಯ್ಕೆಮಾಡಲಾಗುವುದು.

ಸುತ್ತೂರಿನಲ್ಲಿ ಫೆ.6ರಿಂದ 11ರವರೆಗೆ ನಡೆಯಲಿರುವ ಶಿವರಾತ್ರೀಶ್ವರ ಶಿವಯೋಗಿ ಜಾತ್ರಾ ಮಹೋತ್ಸವದಲ್ಲಿ ಬಹುಮಾನ ವಿತರಿಸಲಾಗುವುದು. ಆಸಕ್ತರು ಜ.15ರೊಳಗೆ ಸುತ್ತೂರಿನ ಕೃಷಿ ಕೇಂದ್ರದ ಕಚೇರಿ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆಯಲ್ಲಿ ₹25 ಪಾವತಿಸಿ ಹೆಸರು ನೋಂದಾಯಿಸಿಕೊಳ್ಳಬಹುದು. ಮಾಹಿತಿಗೆ ಮೊ.ಸಂ. 94489 78836 ಸಂಪರ್ಕಿಸಲು ಕೇಂದ್ರದ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.