ADVERTISEMENT

ಸಾಹಿತ್ಯ ಸಮ್ಮೇಳನ: ಪ್ರೊ.ಭಗವಾನ್, ಪ್ರೊ.ಎಸ್‌.ಎಲ್‌.ಭೈರಪ್ಪಗೆ ಆಮಂತ್ರಣ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 14:18 IST
Last Updated 22 ನವೆಂಬರ್ 2024, 14:18 IST
<div class="paragraphs"><p>ಮೈಸೂರಿನಲ್ಲಿ ಲೇಖಕ ಪ್ರೊ.ಕೆ.ಎಸ್‌.ಭಗವಾನ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್‌ ಜೋಶಿ ಮಂಡ್ಯದಲ್ಲಿ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪಾಲ್ಗೊಂಡಿದ್ದರು </p></div>

ಮೈಸೂರಿನಲ್ಲಿ ಲೇಖಕ ಪ್ರೊ.ಕೆ.ಎಸ್‌.ಭಗವಾನ್‌ ಅವರನ್ನು ಶುಕ್ರವಾರ ಭೇಟಿ ಮಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್‌ ಜೋಶಿ ಮಂಡ್ಯದಲ್ಲಿ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪಾಲ್ಗೊಂಡಿದ್ದರು

   

–ಪ್ರಜಾವಾಣಿ ಚಿತ್ರ

ಮೈಸೂರು: ‘ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೈಸೂರು ಜಿಲ್ಲೆಯ ಲೇಖಕರನ್ನು ಆಹ್ವಾನಿಸುವ ಮೂಲಕ ಎಲ್ಲ ಕನ್ನಡಿಗರನ್ನೂ ಸ್ವಾಗತಿಸುವ ಪ್ರಯತ್ನ ಶುರುವಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್‌ ಜೋಶಿ ಹೇಳಿದರು.

ADVERTISEMENT

ಕುವೆಂಪುನಗರದ ನಿವಾಸಿಗಳಾದ ಲೇಖಕ ಪ್ರೊ.ಕೆ.ಎಸ್‌.ಭಗವಾನ್ ಹಾಗೂ ಪ್ರೊ.ಎಸ್‌.ಎಲ್‌.ಭೈರಪ್ಪ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಆಹ್ವಾನಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮಂಡ್ಯ ಚಿಗುರಾದರೆ, ಮೈಸೂರು ಬೇರು. ಅತಿಹೆಚ್ಚು ಜನರು ಕನ್ನಡ ಮಾತನಾಡುವ ಮಂಡ್ಯ ಜಿಲ್ಲೆಯು ಮೈಸೂರಿನ ಭಾಗವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹೊಸ ಜಿಲ್ಲೆ ಮಾಡಿದ್ದರು. ಮಂಡ್ಯದ ಮಾತೃ ಜಿಲ್ಲೆಗೆ ಬಂದು ಎಲ್ಲರಿಗೂ ಆಹ್ವಾನಿಸಲಾಗುತ್ತಿದೆ’ ಎಂದರು.

‘ಸಮ್ಮೇಳನದ ಮೇಲೆ ನಿರೀಕ್ಷೆ ಹೆಚ್ಚಿದೆ. ಹಾವೇರಿ ಸಮ್ಮೇಳನಕ್ಕಿಂತಲೂ ಅದ್ದೂರಿಯಾಗಿ ಮಾಡಲಾಗುವುದು. ಕನ್ನಡದ ಅಸ್ಮಿತೆ, ಸಂಸ್ಕೃತಿ, ಜಾನಪದದ ಬೆಳಕನ್ನು ಸಮ್ಮೇಳನ ನೀಡಲಿದೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಯಶಸ್ವಿಗೊಳಿಸಬೇಕು’ ಎಂದು ಕೋರಿದರು.

‘ಪ್ರೊ.ಸಿ.ಪಿ.ಕೃಷ್ಣಕುಮಾರ್‌, ಪ್ರೊ.ಪ್ರಧಾನ ಗುರುದತ್, ಇತಿಹಾಸ ತಜ್ಞೆ ವಸುಂಧರಾ ಫಿಲಿಯೋಜಾ ಸೇರಿದಂತೆ ಪ್ರಮುಖ ಲೇಖಕರ ನಿವಾಸಕ್ಕೆ ಭೇಟಿ ನೀಡಿ ಆಹ್ವಾನಿಸುತ್ತಿರುವೆ’ ಎಂದರು.

ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕಾರ್ಯದರ್ಶಿ ಭೇರ್ಯ ರಾಮ್‌ಕುಮಾರ್, ಅಧ್ಯಕ್ಷರ ಕಾರ್ಯದರ್ಶಿ ಶ್ರೀನಿವಾಸಮೂರ್ತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.