ನಂಜನಗೂಡು: ಹುಲ್ಲಹಳ್ಳಿ ಹೋಬಳಿಯ ಕಂತೆ ಮಾದೇಶ್ವರ ಬೆಟ್ಟದಲ್ಲಿ ಬುಧವಾರ ರಾತ್ರಿ ಕಳ್ಳರು ದೇವಸ್ಥಾನದ ಬಾಗಿಲು ಮುರಿದು ಐದು ಹುಂಡಿಗಳನ್ನು ಹೊತ್ತೊಯ್ದಿದ್ದಾರೆ.
ಹುಂಡಿಗಳಲ್ಲಿ ₹50 ಸಾವಿರಕ್ಕೂ ಹೆಚ್ಚು ಕಾಣಿಕೆ ಹಣ ಇತ್ತೆಂದು ಅಂದಾಜಿಸಲಾಗಿದೆ. ಕಳ್ಳರು ಒಂದು ಖಾಲಿ ಗೋಲಕವನ್ನು ಬೆಟ್ಟದಿಂದ 200 ಮೀಟರ್ ದೂರದಲ್ಲಿ ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಎಎಸ್‌ಐ ಶಿವಣ್ಣ, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.