ADVERTISEMENT

ಕೃಷ್ಣರಾಜ | ಬಿಜೆಪಿ ಅಭ್ಯರ್ಥಿ ₹ 35ಸಾವಿರ ಕೂಲಿ ಪಾವತಿಸುವುದು ಬಾಕಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2023, 14:03 IST
Last Updated 20 ಏಪ್ರಿಲ್ 2023, 14:03 IST
   

ಮೈಸೂರು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ.ಎಸ್.ಶ್ರೀವತ್ಸ ಒಟ್ಟು ₹ 36.89 ಲಕ್ಷ ಮೌಲ್ಯದ ಚರಾಸ್ತಿ ₹ 12 ಲಕ್ಷ ಮೌಲ್ಯದ ಸ್ವಯಾರ್ಜಿತ ಸ್ವತ್ತು (ಕೆಸರೆಯಲ್ಲಿ 5 ನಿವೇಶನಗಳು) ಹೊಂದಿದ್ದಾರೆ.

ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು ವೈಯಕ್ತಿಕ ವಿವರಗಳನ್ನು ಒದಗಿಸಿದ್ದಾರೆ. ರಾಮಾನುಜ ರಸ್ತೆಯ ನಿವಾಸಿಯಾದ ಅವರು, 56 ವರ್ಷ ವಯಸ್ಸಿನ ಅವರು ಬಿ.ಕಾಂ. ವಿದ್ಯಾರ್ಹತೆಯವರು. ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಹೊಂದಿದ್ದಾರೆ. 2017-18ರಲ್ಲಿ ₹ 4.46 ಲಕ್ಷ, 2018-19ರಲ್ಲಿ ₹ 3.76 ಲಕ್ಷ, 2019-20ರಲ್ಲಿ ₹ 4.79 ಲಕ್ಷ, 2020-21ರಲ್ಲಿ ₹ 4.86 ಹಾಗೂ 2021-22ರಲ್ಲಿ ₹ 4,88 ಲಕ್ಷ ಆದಾಯ ತೆರಿಗೆ ಪಾವತಿಸಿದ್ದಾರೆ.

ಕೈಯಲ್ಲಿ ₹ 64,634 ನಗದು ಇಟ್ಟಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ₹ 12 ಲಕ್ಷ ಠೇವಣಿ ಇಟ್ಟಿದ್ದಾರೆ. ವಿಶಾಕ್‌ ಗಣೇಶ್‌ರಾವ್‌ ಎನ್ನುವವರಿಗೆ ₹ 8 ಲಕ್ಷ ಹಾಗೂ ಉಮಾದೇವಿ ಎನ್ನುವವರಿಗೆ ₹ 1.50 ಲಕ್ಷ ಸಾಲ ನೀಡಿದ್ದಾರೆ. ಟೊಯೊಟಾ ಇಟಿಯೋಸ್ ಕಾರು ಮತ್ತು 2 ದ್ವಿಚಕ್ರವಾಹನಗಳಿವೆ. ₹ 3.15 ಲಕ್ಷ ಮೌಲ್ಯದ 150 ಗ್ರಾಂ. ಚಿನ್ನಾಭರಣ ಹೊಂದಿದ್ದಾರೆ.

ADVERTISEMENT

ಗುತ್ತಿಗೆದಾರರಾದ ಅವರ ಬಳಿ ಸದ್ಯ, ₹ 15,010 ಮೌಲ್ಯದ ನಿರ್ಮಾಣ ಸಾಮಗ್ರಿಗಳ ದಾಸ್ತಾನಿದೆ. ಅವರು ₹ 35ಸಾವಿರ ಕೂಲಿ ಪಾವತಿಸಬೇಕಿದೆ ಹಾಗೂ ₹ 1 ಲಕ್ಷ ಸಾಲ ಹೊಂದಿದ್ದಾರೆ. ತಮಗೆ ಗುತ್ತಿಗೆದಾರ ವೃತ್ತಿ ಹಾಗೂ ಠೇವಣಿಗಳ ಮೇಲಿನ ಬಡ್ಡಿಯೇ ಆದಾಯದ ಮೂಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.