ADVERTISEMENT

ಮುಂದುವರಿದ ಮಳೆ | ಮೈಸೂರು- ಊಟಿ ಹೆದ್ದಾರಿ ಜಲಾವೃತ: ವಾಹನ ಸಂಚಾರಕ್ಕೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 19 ಜುಲೈ 2024, 3:04 IST
Last Updated 19 ಜುಲೈ 2024, 3:04 IST
<div class="paragraphs"><p>ಜಲಾವೃತಗೊಂಡಿರುವ ಮೈಸೂರು–ಊಟಿ ಹೆದ್ದಾರಿ&nbsp;</p></div>

ಜಲಾವೃತಗೊಂಡಿರುವ ಮೈಸೂರು–ಊಟಿ ಹೆದ್ದಾರಿ 

   

ಮೈಸೂರು: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರವೂ ಮಳೆ ಮುಂದುವರಿದಿದೆ. ನೆರೆಯ ಕೇರಳದ ವಯನಾಡು ಪ್ರದೇಶದಲ್ಲಿ ಮಳೆ ಮುಂದುವರಿದಿರುವ ಪರಿಣಾಮ, ಕಬಿನಿ ಜಲಾಶಯದಿಂದ ಕಪಿಲಾ ನದಿಗೆ 70ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿದ್ದು, ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಪಿಲಾ ನದಿಯಲ್ಲಿ ಪ್ರವಾಹ ಹೆಚ್ಚಿದ್ದರಿಂದ, ನಂಜನಗೂಡು ಹೊರವಲಯದ ಮಲ್ಲನ ಮೂಲೆ ಮಠದ ಬಳಿ ಮೈಸೂರು- ಊಟಿ ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದೆ.

ADVERTISEMENT

ಹೆದ್ದಾರಿಯಲ್ಲಿ 4 ಅಡಿಗೂ ಹೆಚ್ಚು ನೀರು ಬಂದಿದ್ದು, ಈ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಮೈಸೂರಿನಿಂದ ನಂಜನಗೂಡಿಗೆ ತೆರಳುವ ವಾಹನಗಳನ್ನು ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಬಳಿ ಬ್ಯಾರಿಕೇಡ್ ಅಳವಡಿಸಿ ತಡೆಯಲಾಗಿದೆ. ಅಡಕನಹಳ್ಳಿ ಮಾರ್ಗವಾಗಿ ನಂಜನಗೂಡಿಗೆ ಸಂಚರಿಸುವಂತೆ ತಿಳಿಸಲಾಗುತ್ತಿದೆ. ನಂಜನಗೂಡಿನಿಂದ ಮೈಸೂರಿಗೆ ತೆರಳುವ ವಾಹನಗಳು ತಾಂಡವಪುರ ಮೂಲಕ ಹೆಜ್ಜಿಗೆ ಸೇತುವೆ ಮೂಲಕ ಸಂಚರಿಸಲು ತಿಳಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.