ADVERTISEMENT

ಧನುಷ್ಕೋಟಿ; ಧುಮ್ಮಿಕ್ಕುತ್ತಿದೆ ಕಾವೇರಿ

ಚುಂಚನಕಟ್ಟೆ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು

ಸಾಲಿಗ್ರಾಮ ಯಶವಂತ್
Published 30 ಜೂನ್ 2024, 7:25 IST
Last Updated 30 ಜೂನ್ 2024, 7:25 IST
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಮೈದುಂಬಿ ಹರಿಯುವ ಕಾವೇರಿ ‘‘ ಧನುಷ್ಕೋಟಿ‍’’ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ರಮಣೀಯ ದೃಶ್ಯ
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಮೈದುಂಬಿ ಹರಿಯುವ ಕಾವೇರಿ ‘‘ ಧನುಷ್ಕೋಟಿ‍’’ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ರಮಣೀಯ ದೃಶ್ಯ   

ಸಾಲಿಗ್ರಾಮ: ಮುಂಗಾರು ವಿಳಂಬವಾದರೂ ಈಚೆಗೆ ಸುರಿದ ಮಳೆಯಿಂದ ಕಾವೇರಿ ಮೈದುಂಬಿರುವುದಕ್ಕೆ ಸಂತಸಗೊಂಡ ಮಹಿಳೆಯರು ಬಾಗಿನ ಅರ್ಪಿಸಿದರೆ, ಪ್ರಕೃತಿ ಮಡಿಲಿನಲ್ಲಿರುವ ‘ಧನುಷ್ಕೋಟಿ ಜಲಪಾತ’ದಲ್ಲಿ ಧುಮ್ಮಿಕ್ಕುತ್ತಿರುವ ನದಿಯ ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡು ತಾಲ್ಲೂಕಿನ ಚುಂಚನಕಟ್ಟೆ ಪ್ರವಾಸಿ ಕೇಂದ್ರಕ್ಕೆ ಬರುತ್ತಿದೆ.

ಕೊಡಗಿನಲ್ಲಿ ವರ್ಷಧಾರೆ ಶುರುವಾದರೆ ಮೈದುಂಬಿ ಹರಿಯುವ ಕಾವೇರಿ ಪಥದಲ್ಲಿ ಜಲಪಾತಗಳು ಕಾಣಸಿಗುವುದು ಸಾಮಾನ್ಯ. ವಿಶೇಷ ಎಂದರೆ ಶ್ರೀರಾಮ ಪತ್ನಿ ಸೀತೆ, ಸಹೋದರ ಲಕ್ಷ್ಮಣನೊಂದಿಗೆ ವನವಾಸ ಮಾಡಿರುವ ಐತಿಹ್ಯ ಇರುವ ಚುಂಚನಕಟ್ಟೆ ಹೊರವಲಯದಲ್ಲಿರುವ, ಸ್ವತಃ ಶ್ರೀರಾಮನಿಂದಲೇ ನಿರ್ಮಾಣಗೊಂಡಿದೆ ಎಂದು ಹೇಳಲಾಗುವ ‘ಧನುಷ್ಕೋಟಿ ಜಲಪಾತ’ದಲ್ಲಿ 40ಕ್ಕೂ ಹೆಚ್ಚು ಅಡಿಗಳಿಂದ ಧುಮ್ಮಿಕ್ಕುವ ಕಾವೇರಿಯ ಮನಮೋಹಕ ದೃಶ್ಯವನ್ನು ನೋಡುವುದೇ ಕಣ್ಣಿಗೆ ಹಬ್ಬ.

ಶ್ರೀರಾಮ ವನವಾಸ ಮಾಡಿದ್ದ ದಿನಗಳಲ್ಲಿ ಚುಂಚನಕಟ್ಟೆ ಚುಂಚ ಎಂಬ ಪಾಳೇಗಾರನ ಆಳ್ವಿಕೆಗೆ ಒಳಪಟ್ಟಿತ್ತು. ಸ್ವಲ್ಪ ದಿನಗಳ ಕಾಲ ಇಲ್ಲೇ ವಾಸ್ತವ್ಯ ಮಾಡಲು ಪಾಳೇಗಾರನಿಂದ ಅನುಮತಿ ಪಡೆದುಕೊಂಡು ಬಹಳಷ್ಟು ದಿನಗಳ ಕಾಲ ವಾಸ್ತವ್ಯ ಮಾಡಿರುವ ಕುರುಹುಗಳು ಇವೆ. ವನವಾಸದ ದಿನಗಳಲ್ಲಿ ಸೀತಾಮಾತೆ ‘ನೀರು ಬೇಕು’ ಎಂದು ರಾಮನಿಗೆ ಕೇಳಿದಾಗ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ಜನರು ಈಗಲೂ ಭಕ್ತಿಯಿಂದ ‘ಧನುಷ್ಕೋಟಿ’ ಎಂದು ಪೂಜೆ ಸಲ್ಲಿಸುತ್ತಾರೆ.

ADVERTISEMENT

ಪ್ರಕೃತಿಯ ಸೊಬಗಿನಲ್ಲಿ, ಕಾವೇರಿ ಧುಮ್ಮಿಕ್ಕುವ ಆರ್ಭಟ ಸುಮಾರು 1 ಕಿಲೋ ಮೀಟರ್ ದೂರದ ತನಕ ಕೇಳಿಸುತ್ತದೆ. ಆದರೆ, ನದಿ ದಂಡೆ ಮೇಲೆ ಇರುವ ಕೋದಂಡರಾಮನ ದೇವಾಲಯದ ಗರ್ಭಗುಡಿಗೆ ಹೋದ ಭಕ್ತರಿಗೆ ನದಿಯ ಶಬ್ಧ ಕೇಳಿಸುವುದಿಲ್ಲ. ಇದು ಪ್ರವಾಸಿಗರಿಗೆ ವಿಸ್ಮಯವಾಗಿದೆ.

ಪ್ರವಾಸಿಗರು ಮುಂಜಾನೆಯಿಂದ ಮಧ್ಯಾಹ್ನದ ತನಕ ನದಿ ದಂಡೆ ಮೇಲೆ ಪ್ರಕೃತಿಯನ್ನು ಕಣ್ತುಂಬಿಕೊಂಡು, ನಂತರ ಕೋದಂಡರಾಮನ ದರ್ಶನ ಪಡೆದು ಹಿಂತಿರುಗುತ್ತಾರೆ.

‘ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವುದನ್ನು ಮನಗಂಡು ಹಿಂದಿನ ಶಾಸಕ ಸಾ.ರಾ. ಮಹೇಶ್ ಶನಿವಾರ ಮತ್ತು ಭಾನುವಾರ ಪ್ರಸಾದ ಸೇವೆ ಯೋಜನೆಯನ್ನು ಜಾರಿಗೆ ತಂದಿದ್ದರು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಯೋಜನೆಗೆ ಗ್ರಹಣ ಹಿಡಿದಿದೆ’ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಂದ ಪ್ರವಾಸಿಗರು ಕುಟುಂಬ ಸದಸ್ಯರೊಂದಿಗೆ ಬರುತ್ತಿದ್ದು, ಮೂಲ ಸೌಲಭ್ಯದ ಕೊರತೆಯಿಂದಾಗಿ ಹಿಡಿಶಾಪ ಹಾಕುತ್ತಿದ್ದಾರೆ.

ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ಹರಿಯುತ್ತಿರುವ ಕಾವೇರಿಗೆ ಅಡ್ಡಲಾಗಿ ನಿರ್ಮಿಸಿರುವ ರಾಮಸಮುದ್ರ ಅಣೆಕಟ್ಟೆಯಿಂದ ಹರಿಯುತ್ತಿರುವುದು
ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯ ಹೊರವಲಯದಲ್ಲಿ ಮೈದುಂಬಿ ಹರಿಯುವ ಕಾವೇರಿ ‘ಧನುಷ್ಕೋಟಿ‍’ ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ರಮಣೀಯ ದೃಶ್ಯ

40 ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ ಹಿಂದೆ ಆರಂಭಿಸಿದ್ದ ಪ್ರಸಾದ ಯೋಜನೆ ಸ್ಥಗಿತ ಪ್ರವಾಸಿಗರಿಗೆ ಮೂಲ ಸೌಲಭ್ಯ ಕಲ್ಪಿಸಲು ಮನವಿ

ಪ್ರವಾಸಿ ತಾಣಕ್ಕೆ ಸಾವಿರಾರು ಮಂದಿ ಕುಟುಂಬದವರೊಂದಿಗೆ ಬರುತ್ತಿದ್ದಾರೆ. ಆದರೆ ಮೂಲ ಸೌಲಭ್ಯವೇ ಸಿಗದಿದ್ದರೆ ಬರಲು ಇಷ್ಟ ಪಡುವುದಿಲ್ಲ. ಚುಂಚನಕಟ್ಟೆ ಅಭಿವೃದ್ಧಿಪಡಿಸುವ ಅಗತ್ಯವಿದೆ.

-ಚಂದ್ರು ಚುಂಚನಕಟ್ಟೆ

ಸಾಲಿಗ್ರಾಮ: ಮುಂಗಾರು ಮಳೆ ಮುಗ್ಗರಿಸಿದರೂ ಕೂಡಾ ಸಕಾಲಕ್ಕೆ ಕಾವೇರಿ ಮೈದುಂಬಿ ಆರ್ಭಟಿಸುವುದನ್ನು ಕಂಡು ಸಂತಸ ಗೊಂಡಿರುವ ಮಹಿಳೆಯರು ಬಾಗಿನ ಅರ್ಪಿಸುತ್ತಿದ್ದರೆ ಪ್ರಕೃತಿ ಮಡಿಲಿನಲ್ಲಿ ಇರುವ ‘‘ಧನುಷ್ಕೋಟಿ ಜಲಪಾತ’’ದಲ್ಲಿ ಧುಮ್ಮಿಕ್ಕುತ್ತಿರುವ ಕಾವೇರಿಯ ರುದ್ರ ರಮಣೀಯ ನೃತ್ಯವನ್ನು ಕಣ್ತುಂಬಿ ಕೊಳ್ಳಲು ಪ್ರವಾಸಿಗರು ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆ ಪ್ರವಾಸಿ ಕೇಂದ್ರಕ್ಕೆ ಹರಿದು ಬರುತ್ತಿದ್ದಾರೆ. ವಾಡಿಕೆಯಂತೆ ಕೊಡಗಿನಲ್ಲಿ ವರ್ಷಧಾರೆ ಶುರುವಾದರೆ ಮೈದುಂಬಿ ಹರಿಯುವ ಕಾವೇರಿ ಪಥದಲ್ಲಿ ಜಲಪಾತಗಳು ಕಾಣಸಿಗುವುದು ಸಾಮಾನ್ಯವಾಗಿದ್ದು ವಿಶೇಷ ಎಂದರೆ ಶ್ರೀರಾಮ ಪತ್ನಿ ಸೀತಾಮಾತೆ ಸಹೋದರ ಲಕ್ಷ್ಮಣನೊಂದಿಗೆ ವನವಾಸ ಮಾಡಿರುವ ಐತಿಹ್ಯ ಇರುವ ಚುಂಚನಕಟ್ಟೆ ಹೊರವಲಯದಲ್ಲಿ ಇರುವ ಪ್ರಕೃತಿಯ ಐಸಿರಿಯ ನಡುವೆ ಮೈದುಂಬಿ ಹರಿಯುತ್ತಿರುವ ಕಾವೇರಿ ನದಿಯಲ್ಲಿ ಸ್ವತ ಶ್ರೀರಾಮನಿಂದಲ್ಲೇ ನಿರ್ಮಾಣ ಗೊಂಡಿದೆ ಎಂದು ಹೇಳಲಾಗುವ ‘‘ ಧನುಷ್ಕೋಟಿ ಜಲಪಾತ’’ದಲ್ಲಿ ಸುಮಾರು 40ಕ್ಕೂ ಹೆಚ್ಚು ಅಡಿಗಳಿಂದ ಧುಮ್ಮಿಕ್ಕುವ ಕಾವೇರಿಯ ರುದ್ರರಮಣೀಯ ದೃಶ್ಯವನ್ನು ವೀಕ್ಷಣೆ ಮಾಡಲು ಪ್ರವಾಸಿಗರು ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಶ್ರೀರಾಮ ವನವಾಸ ಮಾಡುವ ದಿನಗಳಲ್ಲಿ ಚುಂಚನಕಟ್ಟೆ ಚುಂಚ ಎಂಬ ಪಾಳೇಗಾರನ ಆಳ್ವಿಕೆಗೆ ಒಳಪಟ್ಟಿತ್ತು ಸ್ವಲ್ಪ ದಿನಗಳ ಕಾಲ ಇಲ್ಲೇ ವಾಸ್ತವ್ಯ ಮಾಡಲು ಪಾಳೇಗಾರನಿಂದ ಅನುಮತಿ ಪಡೆದು ಕೊಂಡು ಬಹಳಷ್ಟು ದಿನಗಳ ಕಾಲ ವಾಸ್ತವ್ಯ ಮಾಡಿರುವ ಕುರುಹುಗಳು ಇರುವ ಈ ಪ್ರವಾಸಿ ತಾಣಕ್ಕೆ ‘‘ ಧನುಷ್ಕೋಟಿ ಜಲಪಾತ’’ವೇ ಮುಖ್ಯ ಆಕರ್ಷಣಿಯ ಕೇಂದ್ರವಾಗಿದೆ. ವನವಾಸದ ದಿನಗಳಲ್ಲಿ ಸೀತಾಮಾತೆ ನೀರು ಬೇಕು ಎಂದು ರಾಮನಿಗೆ ಕೇಳಿದಾಗ ಬಾಣ ಬಿಟ್ಟು ನೀರು ಬರುವಂತೆ ಮಾಡಿದ ಸ್ಥಳವನ್ನು ಜನರು ಭಕ್ತಿಯಿಂದ ‘‘ಧನುಷ್ಕೋಟಿ’’ ಎಂದು ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸುವುದು ಸಾಮಾನ್ಯವಾಗಿದೆ. ಪ್ರಕೃತಿಯ ಸೊಬಗಿನಲ್ಲಿ ಇರುವ ‘‘ಧನುಷ್ಕೋಟಿ ಜಲಪಾತ’’ದಲ್ಲಿ ಕಾವೇರಿ ಧುಮ್ಮಿಕ್ಕುವ ಆರ್ಭಟ ಸುಮಾರು 1ಕಿಲೋಮೀಟರ್ ದೂರದ ತನಕ ಕೇಳಿಸುತ್ತದೆ. ಆದರೆ ನದಿದಂಡೆ ಮೇಲೆ ಇರುವ ಕೋದಂಡರಾಮನ ದೇವಾಲಯದ ಗರ್ಭಗುಡಿಗೆ ಹೋದ ಭಕ್ತರಿಗೆ ಕಾವೇರಿಯ ಅರ್ಭಟ ಮಾತ್ರ ಕಿವಿ ಮೇಲೆ ಬೀಳುವುದೇ ಇಲ್ಲ ಈ ವಿಸ್ಮಯವನ್ನು ಗಮನಿಸುವ ಪ್ರವಾಸಿಗರು ಏನಪ್ಪಾ ಇದು ಪ್ರಕೃತಿಯ ಗೌಪ್ಯತೆಯೋ ಅಥವಾ ದೇವರ ಕೃಪೆಯೋ ಎಂದು ಮೂಕ ವಿಸ್ಮಿತರಾಗುತ್ತಾರೆ. ಮೈದುಂಬಿದ ಕಾವೇರಿಯ ರುದ್ರ ರಮಣೀಯ ನೃತ್ಯವನ್ನು ವೀಕ್ಷಣೆ ಮಾಡಲು ಬರುತ್ತಿರುವ ಪ್ರವಾಸಿಗರು ಮುಂಜಾನೆಯಿಂದ ಮಧ್ಯಾಹ್ನದ ತನಕ ನದಿದಂಡೆ ಮೇಲೆ ಪ್ರಕೃತಿಯ ಐಸಿರಿಯನ್ನು ಕಣ್ತುಂಬಿ ಕೊಂಡ ನಂತರ ಕೋದಂಡರಾಮನ ದರ್ಶನ ಪಡೆದು ಹಿಂತಿರುಗುತ್ತಿದ್ದಾರೆ. ಪ್ರವಾಸಿ ಕೇಂದ್ರಕ್ಕೆ ವಾರಾಂತ್ಯದಲ್ಲಿ ಬಹುತೇಕ ಪ್ರವಾಸಿಗರು ಭೇಟಿ ನೀಡುವುದನ್ನು ಮನಗಂಡು ಅಂದಿನ ಶಾಸಕ ಸಾ.ರಾ.ಮಹೇಶ್ ಶನಿವಾರ ಮತ್ತು ಭಾನುವಾರ ಪ್ರಸಾದವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಈ ಯೋಜನೆಗೆ ಗ್ರಹಣ ಹಿಡಿದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೈಸೂರು ಹಾಸನ ಮಂಡ್ಯ ಚಾಮರಾಜನಗರ ಜಿಲ್ಲೆಗಳ ಬಹುತೇಕ ಗ್ರಾಮಗಳಿಂದ ಪ್ರವಾಸಿಗರು ಕುಟುಂಬದ ಸದಸ್ಯರೊಂದಿಗೆ ಆಗಮಿಸುತ್ತಿದ್ದು ಮೂಲ ಸೌಲಭ್ಯದ ಕೊರತೆಯಿಂದಾಗಿ ಹಿಡಿಶಾಪ ಹಾಕುತ್ತಿದ್ದಾರೆ. ಪ್ರವಾಸಿ ತಾಣಕ್ಕೆ ಸಾವಿರಾರು ಮಂದಿ ಕುಟುಂಬದ ಸದಸ್ಯರೊಂದಿಗೆ ಬರುತ್ತಿದ್ದಾರೆ. ಆದರೆ ಮೂಲ ಸೌಲಭ್ಯವೇ ಸಿಗದಿದ್ದರೆ ಯಾರು ಕೂಡಾ ಪ್ರವಾಸಿ ಕೇಂದ್ರಕ್ಕೆ ಬರಲು ಇಷ್ಟ ಪಡುವುದಿಲ್ಲ. ಚುಂಚನಕಟ್ಟೆ ಪ್ರವಾಸಿ ಕೇಂದ್ರವನ್ನು ಅಭಿವೃದ್ದಿ ಪಡಿಸುವ ಅಗತ್ಯವಿದೆ. ಚಂದ್ರು ಚುಂಚನಕಟ್ಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.