ADVERTISEMENT

ಕುಸುಮ್ ಯೋಜನೆ: ಸ್ಥಳ ಪರಿಶೀಲಿಸಿದ ಮೈಸೂರು ಡಿಸಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2024, 13:58 IST
Last Updated 17 ಜೂನ್ 2024, 13:58 IST
ಬೆಟ್ಟದಪುರ ಸಮೀಪದ ಕೋಮಲಾಪುರದಲ್ಲಿ ಕುಸುಮ್ ಯೋಜನೆ ಅಡಿಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸ್ಥಳ ಪರಿಶೀಲನೆ ನಡೆಸಿದರು
ಬೆಟ್ಟದಪುರ ಸಮೀಪದ ಕೋಮಲಾಪುರದಲ್ಲಿ ಕುಸುಮ್ ಯೋಜನೆ ಅಡಿಯಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸ್ಥಳ ಪರಿಶೀಲನೆ ನಡೆಸಿದರು   

ಬೆಟ್ಟದಪುರ: ಸಮೀಪದ ಕೋಮಲಾಪುರದಲ್ಲಿ ಕುಸುಮ್ ಯೋಜನೆ ಅಡಿಯಲ್ಲಿ ಸ್ಥಳ ಪರಿಶೀಲನೆ ಮಾಡಲು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಸೋಮವಾರ ಭೇಟಿ ನೀಡಿ ಸರ್ಕಾರದ ಗೋಮಾಳ ಪರಿಶೀಲನೆ ನಡೆಸಿದರು.

ಬಳಿಕ ಮಾತನಾಡಿದ ಅವರು, 'ಈ ಯೋಜನೆಯಿಂದ ರೈತರು ಆದಾಯವನ್ನು ಹೆಚ್ಚಿಸಲು ಹಾಗೂ ಆಧುನಿಕತೆಯ ಬೇಸಾಯಕ್ಕಾಗಿ ಅನುಕೂಲವಾಗುವ ದೃಷ್ಟಿಯಿಂದ, ದೇಶಾದ್ಯಂತ ಸೌರ ಪಂಪ್ ಹಾಗೂ ವಿದ್ಯುತ್ ಸ್ಥಾವರ ಸ್ಥಾಪಿಸಲು ಸರ್ಕಾರ ಈ ಯೋಜನೆಯನ್ನು ರೈತರಿಗಾಗಿ ಅನುಷ್ಠಾನಕ್ಕೆ ತರಲಾಗಿದೆ’ ಎಂದರು.

‘ಗ್ರಾಮದ ಸರ್ವೆನಂಬರ್ 105, 106, 107, 108/1, 111/1 ಒಟ್ಟು 46 ಎಕರೆ ಪರಿಶೀಲಿಸಲಾಗಿದೆ.ಇದರಿಂದ ರೈತರಿಗೆ ತಮ್ಮ ಕೃಷಿ ಪಂಪ್‌ಗಳನ್ನು ಸೋಲಾರೈಸ್ ಮಾಡುವ ಮೂಲಕ ಬೇಸಾಯಕ್ಕೆ ಅನುಕೂಲವಾಗಲಿದೆ. ಎಲ್ಲಾ ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಕುಂಇ್ ಅಹಮದ್, ಸೆಸ್ಕ್ ಅಧಿಕಾರಿ ಸುನಿಲ್ ಕುಮಾರ್, ಕಂದಾಯ ನಿರೀಕ್ಷಕ ಅಜ್ಮಹಲ್ ಶರೀಫ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.