ಮೈಸೂರು: ಇಲ್ಲಿನ ಮೈಸೂರು ಅರಮನೆ ಆವರಣದಲ್ಲಿ ಶ್ರೀಲಕ್ಷ್ಮೀರಮಣ ಸ್ವಾಮಿ ಬ್ರಹ್ಮರಥೋತ್ಸವವು ಮಂಗಳವಾರ ನೆರವೇರಿತು.
ನಸುಕಿನಿಂದಲೇ ವಿವಿಧ ಪೂಜಾಕೈಂಕರ್ಯಗಳು ದೇಗುಲದಲ್ಲಿ ಆರಂಭವಾಯಿತು. ಬೆಳಿಗ್ಗೆ 11.12ರ ಶುಭಲಗ್ನದಲ್ಲಿ ರಥೋತ್ಸವ ನಡೆಯಿತು. ಜಿಟಿಜಿಟಿ ಮಳೆಯ ನಡುವೆ ನೂರಾರು ಭಕ್ತರು ರಥೋತ್ಸವದಲ್ಲಿ ಭಾಗಿಯಾದರು.
ಅರಮನೆ ಆವರಣದಲ್ಲಿ 1499ರಲ್ಲಿ ನಿರ್ಮಾಣವಾದ ಈ ದೇಗುಲವು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಮೇ 18ರಂದು ರಾತ್ರಿ ನಿತೋತ್ಸವ, 19ರಂದು ಬೆಳಿಗ್ಗೆ ಅವಭೃಥೋತ್ಸವ, ರಾತ್ರಿ ಧ್ವಜಾರೋಹಣ, 20ರಂದು ಬೆಳಿಗ್ಗೆ ಮಹಾಭಿಷೇಕ, ರಾತ್ರಿ ದ್ವಾದಶರಾಧನ ಕಾರ್ಯಕ್ರಮಗಳು ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.