ADVERTISEMENT

ಮೈಸೂರು | ಲತಾ ಸೇರಿ ಹಲವರಿಗೆ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 15:31 IST
Last Updated 30 ಜೂನ್ 2024, 15:31 IST
ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಮೈಸೂರು ಸಾಹಿತ್ಯ–ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕವಯತ್ರಿ ಲತಾ ರಾಜಶೇಖರ್‌ ಸೇರಿದಂತೆ ಹಲವು ಸಾಧಕರಿಗೆ ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ
ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಮೈಸೂರು ಸಾಹಿತ್ಯ–ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕವಯತ್ರಿ ಲತಾ ರಾಜಶೇಖರ್‌ ಸೇರಿದಂತೆ ಹಲವು ಸಾಧಕರಿಗೆ ಭಾನುವಾರ ಪ್ರಶಸ್ತಿ ಪ್ರದಾನ ಮಾಡಲಾಯಿತು –ಪ್ರಜಾವಾಣಿ ಚಿತ್ರ   

ಮೈಸೂರು: ಇಲ್ಲಿನ ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಮೈಸೂರು ಸಾಹಿತ್ಯ–ಸಾಂಸ್ಕೃತಿಕ ಪ್ರತಿಷ್ಠಾನದಿಂದ ಹೇಮಗಂಗಾ ವಿರಚಿತ ‘ಕನಸಿಲ್ಲದ ಹಾದಿಯಲ್ಲಿ’ ಕವನ ಸಂಕಲನ ಬಿಡುಗಡೆ, ಚುಟುಕು ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ ನಡೆಯಿತು.

ನಗರದ ಐಡಿಯಲ್ ಜಾವಾ ರೋಟರಿ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಕವಯತ್ರಿ ಲತಾ ರಾಜಶೇಖರ್‌ ಬಿಡುಗಡೆ ಮಾಡಿದರು.

ಈ ಪ್ರತಿಷ್ಠಾನಗಳಿಂದ ನೀಡುವ 2024ನೇ ಸಾಲಿನ ಪ್ರಶಸ್ತಿಗಳನ್ನು ಲತಾ ರಾಜಶೇಖರ್‌ (ಮಹಾಕಾವ್ಯ ಸರಸ್ವತಿ), ಪನ್ನಗ ಎಸ್‌.ವಿ. ಹಾಗೂ ಸುನಂದಾ ದಿಲೀಪ್‌ (ಗಾಯನ ಗಂಗಾ), ಬಿ.ಕೆ. ಮೀನಾಕ್ಷಿ, ಸುಜಾತಾ ರವೀಶ್, ಯಶೋದಾ ರಾಮಕೃಷ್ಣ, ಜೆ.ಪ್ರಭಾ ಶಾಸ್ತ್ರಿ ಹಾಗೂ ಪಿ.ಎಸ್. ವೈಲೇಶ ಕೊಡಗು (ಸಾಹಿತ್ಯ ಗಂಗಾ), ಎನ್‌.ಸಿ. ಮಮತಾ (ಸಂಘಟನಾ ಚತುರೆ), ಪ್ರೇಮ್‌ಕುಮಾರ್ ಕೆ. (ವಿದ್ಯಾನಿಧಿ), ಕೇಶವ್ ಕೌಶಿಕ್‌ (ಸಾಧನ ಗಂಗಾ) ಹಾಗೂ ಸೌರವ್‌ ಗಜ್‌ (‍ಪ್ರತಿಭಾ ಗಂಗಾ) ಅವರಿಗೆ ಕವಯತ್ರಿ ಕೆರೋಡಿ ಎಂ. ಲೋಲಾಕ್ಷಿ ಪ್ರದಾನ ಮಾಡಿದರು.

ADVERTISEMENT

ಕವನ ಸಂಕಲನವನ್ನು ಪರಿಚಯಿಸಿದ ಶಿಕ್ಷಕಿ ಶೋಭಾ ಬಿ, ‘ಹೇಮಗಂಗಾ ಅವರು ವೈವಿಧ್ಯಮಯ ವಿಷಯಗಳ ಕುರಿತು ಕವನ ಹಾಗೂ ಹಾಯ್ಕುಗಳನ್ನು ರಚಿಸಿದ್ದಾರೆ. ಮಹಿಳಾ ಸಂವೇದನೆ, ಸದ್ಯದ ಪರಿಸ್ಥಿತಿ, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಮೊದಲಾದವುಗಳ ಬಗ್ಗೆ ಬರೆದಿದ್ದಾರೆ’ ಎಂದು ತಿಳಿಸಿದರು.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಎಂ.ಬಿ. ಸಂತೋಷ್‌ ಅಧ್ಯಕ್ಷತೆ ವಹಿಸಿದ್ದರು. ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಎ.ಹೇಮಗಂಗಾ, ಕವಯತ್ರಿ ಎನ್.ಆರ್. ರೂಪಶ್ರೀ, ಸಿ.ವಾಣಿ ರಾಘವೇಂದ್ರ, ರೇಖಾ ಸಂತೋಷ್, ನೀತು ಎಸ್. ರಾಜ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.