ADVERTISEMENT

ನಾನತ್ವ ಬಿಡಿ, ದೇವರ ಸ್ಮರಿಸಿ: ಗಣಪತಿಶ್ರೀ ಸಲಹೆ

​ಪ್ರಜಾವಾಣಿ ವಾರ್ತೆ
Published 26 ಮೇ 2024, 15:56 IST
Last Updated 26 ಮೇ 2024, 15:56 IST
ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವಿಧ ಕ್ಷೇತ್ರದ ಸಾಧಕರಿಗೆ ಬಿರುದು ಪ್ರದಾನ ಮಾಡಿದರು
ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವಿಧ ಕ್ಷೇತ್ರದ ಸಾಧಕರಿಗೆ ಬಿರುದು ಪ್ರದಾನ ಮಾಡಿದರು   

ಮೈಸೂರು: ‘ನಾನತ್ವವನ್ನು ಬಿಟ್ಟು ದೇವರ ಸ್ಮರಣೆ ಮಾಡಬೇಕು’ ಎಂದು ಇಲ್ಲಿನ ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹೆ ನೀಡಿದರು.

ಸ್ವಾಮೀಜಿಯ 82ನೇ ವರ್ಧಂತಿ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನದಲ್ಲಿರುವ ಎಲ್ಲಾ ಯೋಚನೆಗಳನ್ನು ಬಿಟ್ಟು ಮನಸಾರೆ ಪ್ರಾರ್ಥನೆ ಮಾಡಿ‌ ಒಳ್ಳೆಯದಾಗುತ್ತದೆ. ದತ್ತ ವೆಂಕಟರಮಣನ ಸನ್ನಿಧಿಗೆ ಬಂದು ಗೋವಿಂದನ ಸ್ಮರಣೆ ಮಾಡಿದರೆ ಕಷ್ಟ– ಕೋಟಲೆಗಳಿಂದ ಹೊರ ಬರಬಹುದು. ಶಾಂತಿ– ನೆಮ್ಮದಿಯೂ ದೊರೆಯುತ್ತದೆ’ ಎಂದು ತಿಳಿಸಿದರು.

ADVERTISEMENT

ನಂತರ, ವಿವಿಧ ಕ್ಷೇತ್ರದ ಸಾಧಕರಿಗೆ ದತ್ತ ಪೀಠದಿಂದ ಬಿರುದು ಪ್ರದಾನ ಮಾಡಲಾಯಿತು. ಕಪಿಲವಾಯಿ ರಾಮ ಸೋಮಯಾಜುಲು (ವೇದ ನಿಧಿ), ಬ್ರಜ್‌ ಭೂಷಣ್ ಓಝಾ (ಶಾಸ್ತ್ರ ನಿಧಿ), ನಾಗೈ ಕೆ.ಮುರಳೀಧರನ್ (ನಾದ ನಿಧಿ), ಪ್ರಭಲ ಸುಬ್ರಹ್ಮಣ್ಯ ಶರ್ಮಾ, ಮಾಮಿಳ್ಳಪಲ್ಲಿ ಮೃತ್ಯುಂಜಯ ಪ್ರಸಾದ್, ತ್ರಿಚೂರ್ ಸಹೋದರರಾದ ಶ್ರೀಕೃಷ್ಣಮೋಹನ್ ಮತ್ತು ರಾಮ್‌ಕುಮಾರ್ ಮೋಹನ್ (ದತ್ತ ಪೀಠ ಆಸ್ಥಾನ ವಿದ್ವಾನ್‌), ಮಾಯಾ ಸೀತಾರಾಮ್ (ಸಸ್ಯ ಬಂಧು), ಕರುಮೂರಿ ಲಲಿತಮ್ಮ (ಜಯಲಕ್ಷ್ಮಿ ಪುರಸ್ಕಾರ) ಹಾಗೂ ಸಂಪರ ನಾಗಸಾಯಿ ರಾಮಚಂದ್ರ ಶೇಖರ್ (ದತ್ತ ಪೀಠ ಬಂಧು) ಬಿರುದು ಪಡೆದುಕೊಂಡರು.

ಕಿರಿಯ ಶ್ರೀ ದತ್ತ ವಿಜಯಾನಂದ ತೀರ್ಥ ಸಾನ್ನಿಧ್ಯ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.