ADVERTISEMENT

ಕಲಾವಿದರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿ: ಸೌಭಾಗ್ಯಮೂರ್ತಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 7:53 IST
Last Updated 21 ಅಕ್ಟೋಬರ್ 2024, 7:53 IST
<div class="paragraphs"><p>ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ರಂಗಭೂಮಿ ವೃತಿ ಕಲಾವಿದೆಯರು ಸಂಘ ಆಯೋಜಿಸಿದ್ದ ನೆನಪಿನ ನಾಟಕೋತ್ಸವ ಕಾರ್ಯಕ್ರಮದಲ್ಲಿ ಎಸ್. ಲೀಲಾವತಿ ಅವರು ರಂಗಭೂಮಿ ಕಲಾವಿದೆ ಕೆ.ಎಂ. ಗಿರಿಜಮ್ಮ ಅವರನ್ನು ಸನ್ಮಾನಿಸಿದರು. </p></div>

ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ರಂಗಭೂಮಿ ವೃತಿ ಕಲಾವಿದೆಯರು ಸಂಘ ಆಯೋಜಿಸಿದ್ದ ನೆನಪಿನ ನಾಟಕೋತ್ಸವ ಕಾರ್ಯಕ್ರಮದಲ್ಲಿ ಎಸ್. ಲೀಲಾವತಿ ಅವರು ರಂಗಭೂಮಿ ಕಲಾವಿದೆ ಕೆ.ಎಂ. ಗಿರಿಜಮ್ಮ ಅವರನ್ನು ಸನ್ಮಾನಿಸಿದರು.

   

ಪ್ರಜಾವಾಣಿ ಚಿತ್ರ

ಮೈಸೂರು: ‘ನಾಟಕ ಕಲಾವಿದರು ಸಂಕಷ್ಟದಲ್ಲಿದ್ದು, ಪಿಂಚಣಿ, ವಸತಿ ಸೌಲಭ್ಯಗಳು ಇಲ್ಲ. ಸರ್ಕಾರ ಕೂಡಲೇ ಅವರನ್ನು ಗುರುತಿಸಿ ಸೌಲಭ್ಯ ಕಲ್ಪಿಸಿಕೊಡಬೇಕು’ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಸೌಭಾಗ್ಯಮೂರ್ತಿ ಆಗ್ರಹಿಸಿದರು.

ADVERTISEMENT

ಮೈಸೂರು ಜಿಲ್ಲಾ ರಂಗಭೂಮಿ ವೃತ್ತಿ ಕಲಾವಿದೆಯರ ಸಂಘವು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಭಾನುವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ಎಸ್‌.ಎಸ್.ಗಾಯಿತ್ರಿ ನೆನಪಿನ ನಾಟಕೋತ್ಸವದಲ್ಲಿ ಅವರು ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಕಷ್ಟದಲ್ಲಿರುವ ಕಲಾವಿದರನ್ನು ಗುರುತಿಸುತ್ತಿಲ್ಲ. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಜಲವಾಸುದೇವ ನಾಟಕ ಸಭಾ ಟ್ರಸ್ಟ್‌ ಅಧ್ಯಕ್ಷ ಓಂ ಶ್ರೀನಿವಾಸ್ ಮಾತನಾಡಿ, ‘ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ 30 ವರ್ಷಗಳಿಂದ ನಾಟಕಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯಬೇಕು’ ಎಂದು ಸಲಹೆ ನೀಡಿದರು.

ರಂಗಕಲಾವಿದೆ ಕೆ.ಎಂ.ಗಿರಿಜಮ್ಮ ಅವರನ್ನು ಅಭಿನಂದಿಸಲಾಯಿತು. ಸಂಘದ ಅಧ್ಯಕ್ಷೆ ಎಸ್‌. ವಸಂತಕೃಷ್ಣ, ಕಾರ್ಯದರ್ಶಿ ಎನ್.ಲೀಲಾವತಿ, ಬಿ.ಎ. ಶಾಂತದೇವಿ, ಇಂದ್ರಮ್ಮ , ಜಲವಾಸುದೇವ ನಾಟಕ ಸಭಾ ಟ್ರಸ್ಟ್‌ನ ಸತ್ಯನಾರಾಯಣ ಜಿ. ಹಾಜರಿದ್ದರು.

ಕಾರ್ಯಕ್ರಮದ ಬಳಿಕ ಜಲವಾಸುದೇವ ನಾಟಕ ಸಭಾ ಟ್ರಸ್ಟ್ ನೇತೃತ್ವದಲ್ಲಿ ಮಕ್ಕಳು ‘ಶ್ರೀ ಕೃಷ್ಣಲೀಲೆ’ ನಾಟಕ ಪ್ರದರ್ಶಿಸಿದರು.

ಮೈಸೂರಿನ ಪುರಭವನದಲ್ಲಿ ಮೈಸೂರು ಜಿಲ್ಲಾ ರಂಗಭೂಮಿ ವೃತಿ ಕಲಾವಿದೆಯರು ಸಂಘ ಆಯೋಜಿಸಿದ್ದ ನೆನಪಿನ ನಾಟಕೋತ್ಸವದಲ್ಲಿ ಶ್ರೀ ಜಲವಾಸುದೇವ ನಾಟಕ ಸಭಾ ಟ್ರಸ್ಟ್ ವತಿಯಿಂದ ಮಕ್ಕಳು ಶ್ರೀ ಕೃಷ್ಣಲೀಲೆ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು– ಪ್ರಜಾವಾಣಿ ಚಿತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.