ಮೈಸೂರು: ಮದ್ಯವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು ₹8 ಲಕ್ಷ ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಪಡೆದ ಅಬಕಾರಿ ಇನ್ಸ್ಪೆಕ್ಟರ್ ಎ.ಎ.ಮುಜಾವರ, ಬಿ.ಎಸ್.ಗುರು ಮಲ್ಲೇಶ್, ಅಜಯ್.ಎನ್ ಮತ್ತು ಪ್ರತಾಪ್.ಸಿ ಅವರ ತಂಡವು ನಗರದ ಮೇಸ್ಕೋ ಸ್ಕೂಲ್ ರಸ್ತೆಯ ಬಳಿ ಹುಂಡೈ ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ, ವಿವಿಧ ಬ್ರಾಂಡಿನ 88.560 ಲೀಟರ್ ಮದ್ಯ ಹಾಗೂ 46.920 ಲೀಟರ್ ಬಿಯರ್ ಪತ್ತೆಯಾಗಿದೆ.
‘ಮದ್ಯ ವಶಕ್ಕೆ ಪಡೆದು ಅದನ್ನು ಸಾಗಾಟ ಮಾಡುತ್ತಿದ್ದ ನಾಗರಾಜು ಹಾಗೂ ಆತನಿಗೆ ಮದ್ಯ ಪೂರೈಸಿದ ಶಂಕರಯ್ಯ ಮತ್ತು ವಾಹನ ಮಾಲಿಕರ ವಿರುದ್ಧ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.