ADVERTISEMENT

ಮೈಸೂರು: ಎಂಜಿನಿಯರ್, ಲೈನ್‌ಮೆನ್‌ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2024, 6:32 IST
Last Updated 8 ಮಾರ್ಚ್ 2024, 6:32 IST
ಹರೀಶ್
ಹರೀಶ್   

ಮೈಸೂರು: ಸೆಸ್ಕ್‌ ಕುವೆಂಪುನಗರ ಉಪ ವಿಭಾಗದ ಸಹಾಯಕ ಎಂಜಿನಿಯರ್‌ ಹರೀಶ್ ಮತ್ತು ಲೈನ್‌ಮೆನ್‌ ಗುಂಡಪ್ಪ ಲೋಕಾಯುಕ್ತ ಪೊಲೀಸರ ಬಲೆಗೆ ಗುರುವಾರ ಬಿದ್ದಿದ್ದಾರೆ.

ಎಲೆಕ್ಟ್ರಿಕಲ್‌ ಗುತ್ತಿಗೆದಾರ ಅಭಿಷೇಕ್‌ ಎನ್ನುವವರು ದೂರು ನೀಡಿದ್ದ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ವಾಣಿಜ್ಯ ಕಟ್ಟಡಕ್ಕೆ ಹೆಚ್ಚುವರಿಯಾಗಿ 20 ಕಿಲೋ ವಾಟ್ ವಿದ್ಯುತ್‌ ಒದಗಿಸಲು ₹ 10 ಸಾವಿರ ಲಂಚ ನೀಡುವಂತೆ ಆರೋಪಿಗಳು ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಗುರುವಾರ ಅವರು ಲಂಚದ ಹಣ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ ಎಂದು ಲೋಕಾಯುಕ್ತ ಎಸ್ಪಿ ವಿ.ಜೆ. ಸುಜೀತ್‌ ತಿಳಿಸಿದ್ದಾರೆ.

ಗುಂಡಪ್ಪ

ಡಿವೈಎಸ್ಪಿ ಕೃಷ್ಣಯ್ಯ, ಇನ್‌ಸ್ಪೆಕ್ಟರ್‌ಗಳಾದ ಉಮೇಶ್, ಜಯರತ್ನಾ ಹಾಗೂ ಸಿಬ್ಬಂದಿ ಗುರುಪ್ರಸಾದ್, ಗೋಪಿ ಎಚ್‌.ಎನ್, ವೀರಭದ್ರಸ್ವಾಮಿ, ಕಾಂತರಾಜು, ಆಶಾ ಹಾಗೂ ತ್ರಿವೇಣಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.