ADVERTISEMENT

ಮಹಾಪರಿನಿರ್ವಾಣ ದಿನ: ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2023, 9:23 IST
Last Updated 6 ಡಿಸೆಂಬರ್ 2023, 9:23 IST
   

ಮೈಸೂರು: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ, ‘ಡಾ.ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನ’ದ ಅಂಗವಾಗಿ ನಗರದ ಪುರಭವನದ ಆವರಣದ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಎಸ್ಪಿ ಸೀಮಾ ಲಾಟ್ಕರ್, ಮುಡಾ ಆಯುಕ್ತ ಜಿ.ಟಿ. ದಿನೇಶ್‌ಕುಮಾರ್, ನಗರಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಗೌರವ ಸಲ್ಲಿಸಿದರು. ಪೊಲೀಸ್ ವಾದ್ಯ ವೃಂದವರು ಬ್ಯಾಂಡ್ ನುಡಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ, ಉಪ ಕಾರ್ಯದರ್ಶಿ ಎಂ.ಕೃಷ್ಣರಾಜು, ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ, ಪಾಲಿಕೆ ಹಚ್ಚುವರಿ ಆಯುಕ್ತರಾದ ಜೆ.ಎಸ್.ಸೋಮಶೇಖರ್, ಎಂ.ರೂಪಾ, ಕೌನ್ಸಿಲ್ ಕಾರ್ಯದರ್ಶಿ ರಂಗಸ್ವಾಮಿ, ಮುಡಾ ನಗರ ಯೋಜಕ ಸದಸ್ಯ ಆರ್.ಶೇಷ, ಡಿಸಿಪಿ ಎಸ್.ಜಾಹ್ನವಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಂಗೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಯೋಜನಾಧಿಕಾರಿ ಎಂ.ಮುನಿರಾಜು, ಡಿಎಚ್‌ಒ ಡಾ.ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಎಇ ರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಡಿ.ಸುದರ್ಶನ್, ಮುಖಂಡರಾದ ಪುರುಷೋತ್ತಮ್, ರಾಜು ಪಾಲ್ಗೊಂಡಿದ್ದರು.

ADVERTISEMENT

ಬಳಿಕ ಬೋಧಿರತ್ನ ರತ್ನ ಬಂತೇಜಿ, ಕಲ್ಯಾಣ ಸಿರಿ ಬಂತೇಜಿ ಸಮ್ಮುಖದಲ್ಲಿ ಬುದ್ಧನ ವಿಗ್ರಹದ ಎದುರು ಬುದ್ಧ– ಧಮ್ಮ ಸಂಘ ವಂದನೆ ಸಲ್ಲಿಸಲಾಯಿತು. ಅಮ್ಮ ರಾಮಚಂದ್ರ ತಂಡ ಬುದ್ಧಗೀತೆಗಳನ್ನು ಹಾಡಿತು.

‘ಸರ್ವರಿಗೂ ಸಮಪಾಲು- ಸಮಬಾಳು ಎನ್ನುವುದು ಅಂಬೇಡ್ಕರ್ ಆಶಯವಾಗಿದೆ. ನಾವು ಜ್ಞಾನಕ್ಕೆ ಶರಣಾಗಬೇಕು. ದೇಶದಲ್ಲಿ ಜಾತಿ ಅಳಿದು ಸಮಾನತೆ ಬರಬೇಕು. ಅಸ್ಪೃಶ್ಯತೆ ಹೋದರೆ ಭಾರತ ವಿಶ್ವಗುರುವಾಗಲಿದೆ’ ಎಂದರು.

ಮುಖಂಡರಾದ ಪುಟ್ಟಸ್ವಾಮಿ, ರಾಜಣ್ಣ, ಸೋಮಯ್ಯ ಮಲೆಯೂರು ಹಾಜರಿದ್ದರು.

ಮಾಲಾರ್ಪಣೆ: ರಾಜಕೀಯ ಪಕ್ಷಗಳ ಮುಖಂಡರು, ಸಂಘಟನೆಗಳ ಪದಾಧಿಕಾರಿಗಳು, ಅಭಿಮಾನಿಗಳು, ಶಾಲಾ–ಕಾಲೇಜು ಹಾಗೂ ಹಾಸ್ಟೆಲ್‌ಗಳ ಪ್ರತಿನಿಧಿಗಳು ಅಂಬೇಡ್ಕರ್‌ ಅಂಬೇಡ್ಕರ್‌ ಪ್ರತಿಮೆಗೆ ನಮನ ಸಲ್ಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.