ಮೈಸೂರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೈಸೂರು ಕಚೇರಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜಯಂತಿಯ ಅಂಗವಾಗಿ ವಿವಿಧ ವಿಭಾಗದಲ್ಲಿ ವಿದ್ಯಾರ್ಥಿಗಳಿಗೆ ಈಚೆಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದವರು.
ಪ್ರೌಢಶಾಲಾ ವಿಭಾಗ: ತಿ.ನರಸೀಪುರ ತಾಲ್ಲೂಕಿನ ಮೇದಿನಿಯ ಸರ್ಕಾರಿ ಪ್ರೌಢಶಾಲೆಯ ಸಿದ್ದರಾಜು, ಕೆ.ಆರ್. ನಗರ ತಾಲ್ಲೂಕು ಹನಸೋಗೆಯ ಸರ್ಕಾರಿ ಪ್ರೌಢಶಾಲೆ ಎಂ.ಆರ್. ಮಹಾಲಕ್ಷ್ಮಿ ಹಾಗೂ ನಂಜನಗೂಡಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿ.ಪ್ರೀತು.
ಪದವಿಪೂರ್ವ ಶಿಕ್ಷಣ ವಿಭಾಗ: ನಗರದ ಮರಿಮಲ್ಲಪ್ಪ ಪಿಯು ಕಾಲೇಜಿನ ಪರೀಕ್ಷಾನಂದ್, ಲಕ್ಷ್ಮೀಪುರಂ ಸರ್ಕಾರಿ ಪಿಯು ಕಾಲೇಜಿನ ಎಂ.ಎಸ್. ಚಂದನ ಹಾಗೂ ರಾವಂದೂರು ಸರ್ಕಾರಿ ಪಿಯು ಕಾಲೇಜಿನ ಕೆ.ಯು. ಜಾಹ್ನವಿ.
ಪದವಿ/ಸ್ನಾತಕೋತ್ತರ ಪದವಿ: ತಿ.ನರಸೀಪುರ ತಾಲ್ಲೂಕು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಎಂ. ಮಾದಲಾಂಬಿಕೆ, ಜಯಲಕ್ಷ್ಮೀಪುರಂನ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ(ಸ್ವಾಯತ್ತ) ಸಿ.ಕೆ. ನಿಹಾರಿಕಾ ಹೆಗಡೆ ಹಾಗೂ ನಂಜನಗೂಡು ಜೆಎಸ್‌ಎಸ್ ಕಾಲೇಜಿನ ಎಂ.ಎಸ್. ಕೀರ್ತನಾ.
‘ಜಿಲ್ಲಾ ಮಟ್ಟದಲ್ಲಿ ಮೂರು ವಿಭಾಗಗಳಲ್ಲಿ ನಡೆಸಿದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಬಂಧಗಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು’ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಡಿ.ಅಶೋಕ್‌ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.