ADVERTISEMENT

ಮಹಾವೀರರ ತತ್ವ ಅಳವಡಿಸಿಕೊಳ್ಳಿ: ಮಲ್ಲಿಕಾರ್ಜುನ ಸ್ವಾಮಿ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 16:00 IST
Last Updated 21 ಏಪ್ರಿಲ್ 2024, 16:00 IST
ಮೈಸೂರಿನ ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾವೀರ ಭಾವಚಿತ್ರಕ್ಕೆ ಮಲ್ಲಿಕಾರ್ಜುನಸ್ವಾಮಿ ಪುಷ್ಪಾರ್ಚನೆ ಸಲ್ಲಿಸಿದರು. ಎಂ.ಆರ್.ಸುನೀಲ್‌ ಕುಮಾರ್‌ ಜೈನ್‌, ಸಂತೋಷ್, ಸುರೇಶ್ ಕುಮಾರ್ ಜೈನ್, ಸುರೇಶ್ ಜೈನ್, ಮನ್ವಿತ್ ರಾಜ್, ಶೀಲಾ ಅನಂತ್ ರಾಜ್ ಭಾಗವಹಿಸಿದ್ದರು 

ಮೈಸೂರು: ಇಲ್ಲಿನ ಕಲಾಮಂದಿರದ ಸುಚಿತ್ರಾ ಗ್ಯಾಲರಿಯಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯಿಂದ ಭಗವಾನ್ ಮಹಾವೀರ ಜಯಂತಿ ಆಚರಿಸಲಾಯಿತು.

ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ‘ಭಗವಾನ್ ಮಹಾವೀರರು ಶಾಂತಿ, ಸೌಹಾರ್ದವನ್ನು ಬೋಧಿಸುವ ಮೂಲಕ ಮಾನವನ ಜೀವನ ಮೌಲ್ಯ ಸುಧಾರಿಸಲು ಮಾರ್ಗದರ್ಶನ ನೀಡಿದ್ದಾರೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ದಿಗಂಬರ ಜೈನ ಸಮಾಜದ ಅಧ್ಯಕ್ಷ ಎಂ.ಆರ್.ಸುನೀಲ್‌ ಕುಮಾರ್‌ ಜೈನ್‌ ಮಾತನಾಡಿ, ‘ಮಹಾವೀರರು ಬೋಧಿಸಿದ ತತ್ವಗಳು ಇಂದಿಗೂ ಪ್ರಸ್ತುತ. ಅವರ ಸಂದೇಶಗಳ ಪಾಲನೆಯಿಂದ ಜೀವನದಲ್ಲಿ ನೆಮ್ಮದಿ ಸಿಗುತ್ತದೆ’ ಎಂದರು.

ADVERTISEMENT

ಸಮಾಜದ ಉಪಾಧ್ಯಕ್ಷ ಭರತ್‌ ರಾಜ್, ಕಾರ್ಯದರ್ಶಿ ಲಕ್ಷ್ಮೀಶ ಬಾಬು, ಸಹ ಕಾರ್ಯದರ್ಶಿ ಜಿನೇಂದ್ರ ಪ್ರಕಾಶ್‌, ಕೋಶಾಧ್ಯಕ್ಷ ಜ್ವಾಲೇಂದ್ರ ಪ್ರಸಾದ್‌, ಮುಖಂಡರಾದ ವಶುಪಾಲ್‌, ಶ್ರೀಕಾಂತ್‌, ಭರತ್, ಪ್ರೇಮ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.