ADVERTISEMENT

ಮೈಸೂರಿನಲ್ಲಿ ಮಕರ ಸಂಕ್ರಾಂತಿ: ಸುಗ್ಗಿ ಹಬ್ಬದಲ್ಲಿ ಸಂಭ್ರಮಿಸಿದ ವಿದೇಶಿಯರು

ವಿಡಿಯೊ ಸುದ್ದಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 8:35 IST
Last Updated 15 ಜನವರಿ 2020, 8:35 IST
ರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಹಾಗೂ ಹನುಮಂತೋತ್ಸವ ಸಮಿತಿ ವತಿಯಿಂದ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ನಡೆದ ಸಂಕ್ರಾಂತಿ ಆಚರಣೆಯಲ್ಲಿ ಕಣಕ್ಕೆ ವಿದೇಶಿಯರು ಪುಷ್ಪಾರ್ಚನೆ ಮಾಡಿದರು
ರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಹಾಗೂ ಹನುಮಂತೋತ್ಸವ ಸಮಿತಿ ವತಿಯಿಂದ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ನಡೆದ ಸಂಕ್ರಾಂತಿ ಆಚರಣೆಯಲ್ಲಿ ಕಣಕ್ಕೆ ವಿದೇಶಿಯರು ಪುಷ್ಪಾರ್ಚನೆ ಮಾಡಿದರು   

ಮೈಸೂರು: ಸುಗ್ಗಿ ಹಬ್ಬ ಎಂದೇ ಹೆಸರಾದ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ಆಚರಿಸಲಾಯಿತು. ಇದರಲ್ಲಿ ವಿದೇಶಿಯರೂ ಭಾಗಿಯಾಗುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಸಿದರು.

ರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಹಾಗೂ ಹನುಮಂತೋತ್ಸವ ಸಮಿತಿ ವತಿಯಿಂದ ಇಲ್ಲಿ ಭತ್ತ ಮತ್ತು ರಾಗಿಯ ಕಣವನ್ನು ಹಾಕಲಾಗಿತ್ತು. ಸಿಂಗರಿಸಿದ ಗೋವುಗಳನ್ನು ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಲವು ವಿದೇಶಿಯರೂ ಕಣಕ್ಕೆ ಪೂಜೆ ಸಲ್ಲಿಸಿದರು. ಗೋವುಗಳಿಗೆ ಕಬ್ಬು ಮತ್ತು ಬೆಲ್ಲವನ್ನು ತಿನ್ನಿಸುವ ಮೂಲಕ ಸಂಭ್ರಮಿಸಿದರು.

ಕಾರ್ಯಕರ್ತರು ಎಲ್ಲರಿಗೂ ಎಳ್ಳು ಮತ್ತು ಬೆಲ್ಲವನ್ನು ವಿತರಿಸಿದರು. ವಿನೂತನ ಎನಿಸುವ ಈ ಕಾರ್ಯಕ್ರಮವನ್ನು ನೂರಾರು ಮಂದಿ ವೀಕ್ಷಿಸಿದರು.

ADVERTISEMENT

ಈ ವೇಳೆ ಮಾತನಾಡಿದ ಭಾರತೀಯ ಗೋಪರಿವಾರದ ಜಿಲ್ಲಾ ಸಂಯೋಜಕ ರಾಕೇಶ್‌ಭಟ್, ‘ಸಂಕ್ರಾಂತಿ ಎನ್ನುವುದು ಸುಗ್ಗಿ ಹಬ್ಬ. ಕಣ ಮತ್ತು ಗೋವುಗಳ ಪೂಜೆ ಮಾಡುವ ಮೂಲಕ ಪ್ರಕೃತಿಗೆ ಗೌರವ ಸಲ್ಲಿಸುವುದು ಹಿಂದಿನ ಆಚರಣೆ. ಈ ಆಚರಣೆ ಇತ್ತೀಚಿನ ದಿನಗಳಲ್ಲಿ ಅಳಿದು ಹೋಗುತ್ತಿದೆ. ಇದನ್ನು ಉಳಿಸುವ ಸಲುವಾಗಿ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು’ ಎಂದು ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಬ್ರಿಟನ್ ಮಹಿಳೆ ಮೇರಿ, ‘ಈ ಹಬ್ಬ ಸಂತಸ ತಂದಿತು. ವಿಶೇಷ ಎನಿಸಿತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.