ಮತದಾನ ಜವಾಬ್ದಾರಿಯುತ ಕೆಲಸ
ಮತದಾನ ನಮ್ಮ ಅತ್ಯಂತ ಜವಾಬ್ದಾರಿಯುತ ಕೆಲಸ. ಅದು ನಮ್ಮ ಸಂಪೂರ್ಣವಾದ ಹಕ್ಕು. ಸದ್ಯ ಪ್ರಜಾಪ್ರಭುತ್ವ ಆತಂಕಕಾರಿಯಾದ ಸ್ಥಿತಿಯಲ್ಲಿದೆ. ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತ ಹಕ್ಕನ್ನು ನಾವು ಸ್ಥಾಪನೆಗೊಳಿಸಲೇಬೇಕಾಗಿದೆ. ನಾನು ನಿಮಗೆ ಮತ ಕೊಟ್ಟಿದ್ದೇನೆ; ನೀನು ನಮ್ಮ ಮಾತು ಕೇಳಬೇಕಾದ ಅವಶ್ಯಕತೆ ಇದೆ ಎನ್ನುವುದನ್ನು ಗಟ್ಟಿ ದನಿಯಲ್ಲಿ ಕೇಳುವುದಕ್ಕೆ ಮತ ಹಕ್ಕು ಚಲಾಯಿಸಲೇಬೇಕು.
ಅದಕ್ಕಾಗಿಯೇ ನಾನು ಪ್ರತಿ ಚುನಾವಣೆಯಲ್ಲೂ ಮತದಾನವನ್ನು ಕಡ್ಡಾಯವಾಗಿ ಮಾಡುತ್ತಾ ಬಂದಿದ್ದೇನೆ. ನಾನೂ ಈ ದೇಶದ ಅತ್ಯಂತ ಪ್ರಮುಖ ಪ್ರಜೆ ಎಂದು ಹೇಳಿಕೊಳ್ಳಲು ಸಾಧ್ಯವಾಗುವುದು ನಾವು ಹಕ್ಕು ಚಲಾಯಿಸಿದಾಗಲೆ. ಯುವಜನರು ಮತದಾನದಿಂದ ದೂರಾಗಬಾರದು. ರಸ್ತೆ ಮೂಲಸೌಲಭ್ಯ ಕಲ್ಪಿಸಲಿಲ್ಲವೇಕೆ ಎಂದು ಕೇಳುವುದಕ್ಕೆ ನಾವು ಮತದಾನ ಮಾಡಿರಬೇಕಾಗುತ್ತದೆ. ಇದರ ಮಹತ್ವವನ್ನು ಪ್ರಾಥಮಿಕ ಶಾಲೆಯಿಂದಲೇ ಹೇಳಿಕೊಡಬೇಕು. ಈ ಹಕ್ಕು ಚಲಾಯಿಸಿಲ್ಲದವರಿಗೆ ಸರ್ಕಾರಿ ಹಾಗೂ ಖಾಸಗಿಯ ಯಾವುದೇ ಸೌಲಭ್ಯಗಳನ್ನು ಕೊಡುವುದಿಲ್ಲ ಎಂಬ ನಿಯಮ ಜಾರಿಗೊಳಿಸಬೇಕು. ಆಗ, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುತ್ತಾರೆ. ಮತದ ಮಹತ್ವ, ಶ್ರೇಷ್ಠತೆ ಹಾಗೂ ಘನತೆಯನ್ನು ಮನವರಿಕೆ ಮಾಡಿಕೊಡಬೇಕಾದ ಅವಶ್ಯಕತೆ ಇದೆ. ಅಂತೆಯೇ ಎಲ್ಲರೂ ಸಂವಿಧಾನವನ್ನೂ ತಿಳಿದುಕೊಳ್ಳಬೇಕು.
– ಮಂಡ್ಯ ರಮೇಶ್, ರಂಗ ನಿರ್ದೇಶಕ, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.