ADVERTISEMENT

ಬ್ರಿಟಿಷರ ಕಾಲದಲ್ಲಿಯೇ ಜನಗಣತಿ ಆರಂಭ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 13:28 IST
Last Updated 17 ಅಕ್ಟೋಬರ್ 2024, 13:28 IST
ಡಾ.ಎಚ್‌.ಸಿ. ಮಹದೇವಪ್ಪ
ಡಾ.ಎಚ್‌.ಸಿ. ಮಹದೇವಪ್ಪ   

ಮೈಸೂರು: ‘ರಕ್ತದೊತ್ತಡ, ಆರೋಗ್ಯದ ಕಾರಣಕ್ಕಾಗಿ ಕೆ.ಮರೀಗೌಡ ಅವರು ಮುಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ರಾಜಕೀಯ ಒತ್ತಡಕ್ಕಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.

‘ಅವರಿಗೆ ರಕ್ತದೊತ್ತಡ ಮೊದಲಿನಿಂದಲೂ ಇದೆ. ಈಗ 300, 400ರಷ್ಟು ಒತ್ತಡ ಹೆಚ್ಚಾಗಿದೆ. ರಕ್ತನಾಳಗಳಲ್ಲಿ ಉಂಟಾಗುವ ಒತ್ತಡವೇ ರಕ್ತದೊತ್ತಡ’ ಎಂದು ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಪ್ರಜಾಪ್ರಭುತ್ವದಲ್ಲಿ ಪರ– ವಿರೋಧ ಇದ್ದದ್ದೇ. ಎಲ್ಲವನ್ನು ಸರಿ ಮಾಡಿ ಮುಂದೆ ಹೋಗಲೇಬೇಕು. ಜಾತಿ ಜನಗಣತಿ ನಡೆಸುವುದಾಗಿ ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಿದೆ. ಅದನ್ನು ಅನುಷ್ಠಾನಗೊಳಿಸಲಿದೆ’ ಎಂದರು.

ADVERTISEMENT

‘ಜಾತಿ ಜನಗಣತಿ ನಡೆಸುವುದರಿಂದ ಸಮುದಾಯಗಳ ಜೀವನಮಟ್ಟ, ಆರ್ಥಿಕ ಸ್ಥಿತಿ, ಉದ್ಯೋಗ ಮೊದಲಾದ ಅಂಶಗಳು ಸರ್ಕಾರಕ್ಕೆ ಗೊತ್ತಾಗುತ್ತವೆ. ಅದರಿಂದ ನಿರ್ದಿಷ್ಟ ಯೋಜನೆಗಳನ್ನು ರೂಪಿಸಲು ಸಹಕಾರಿ ಆಗುತ್ತದೆ. ದೇಶದ ವಾರ್ಷಿಕ ಬಜೆಟ್‌ ₹48 ಲಕ್ಷ ಕೋಟಿ ಇದ್ದು, ಅದನ್ನು ಸರಿಯಾಗಿ ವಿನಿಯೋಗಿಸಲು ಜನಗಣತಿ, ಜಾತಿಗಣತಿ ನೆರವಾಗುತ್ತವೆ’ ಎಂದು ತಿಳಿಸಿದರು.

‘ಬ್ರಿಟಿಷರ ಕಾಲದಲ್ಲಿಯೇ ಜನಗಣತಿ ಆರಂಭವಾಗಿದೆ. ಈಗ ಅದನ್ನು ವೈಜ್ಞಾನಿಕವಾಗಿ ಮಾಡಬೇಕೆಂಬುದೇ ನಮ್ಮ ಹಕ್ಕೊತ್ತಾಯ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.