ADVERTISEMENT

’ಕಾಡಾ’ ಅಧ್ಯಕ್ಷರಾಗಿ ಮರಿಸ್ವಾಮಿ ಅಧಿಕಾರ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2024, 14:52 IST
Last Updated 4 ಮಾರ್ಚ್ 2024, 14:52 IST
<div class="paragraphs"><p>ಮೈಸೂರಿನಲ್ಲಿ ‘ಕಾಡಾ’ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಸಿ.ಮರಿಸ್ವಾಮಿ (ಬಲತುದಿ) ಅವರನ್ನು ಮುಖಂಡರಾದ ಜಿ.ಎನ್. ನಂಜುಂಡಸ್ವಾಮಿ, ಎಂ.ಶಿವಣ್ಣ, ಆರ್.ನರೇಂದ್ರ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿನಂದಿಸಿದರು</p></div>

ಮೈಸೂರಿನಲ್ಲಿ ‘ಕಾಡಾ’ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಸಿ.ಮರಿಸ್ವಾಮಿ (ಬಲತುದಿ) ಅವರನ್ನು ಮುಖಂಡರಾದ ಜಿ.ಎನ್. ನಂಜುಂಡಸ್ವಾಮಿ, ಎಂ.ಶಿವಣ್ಣ, ಆರ್.ನರೇಂದ್ರ ಹಾಗೂ ಶಾಸಕ ಎ.ಆರ್. ಕೃಷ್ಣಮೂರ್ತಿ ಅಭಿನಂದಿಸಿದರು

   

-ಪ್ರಜಾವಾಣಿ ಚಿತ್ರ

ಮೈಸೂರು: ಇಲ್ಲಿನ ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರಾಗಿ ಪಿ. ಮರಿಸ್ವಾಮಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ADVERTISEMENT

ಕಾಂಗ್ರೆಸ್‌‍ ಮುಖಂಡರು ಮತ್ತು ಬೆಂಬಲಿಗರ ಸಮ್ಮುಖದಲ್ಲಿ ಕಚೇರಿಯಲ್ಲಿ ಪೂಜೆ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ‘ರೈತ ಕುಟುಂಬದಿಂದ ಬಂದವನು ನಾನು. ಕೃಷಿಕರಿಗೆ ಬೇಕಾದ ಅನುಕೂಲ ಮಾಡಲು ಸಿದ್ಧನಿದ್ದೇನೆ. ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದು ನಡೆಯಬೇಕಾದ ಕೆಲಸಗಳ ಬಗ್ಗೆ ಗಮನಹರಿಸುತ್ತೇನೆ’ ಎಂದು ಹೇಳಿದರು.

‘ಕಾಡಾ ವ್ಯಾಪ್ತಿಯಲ್ಲಿ ನೀರಾವರಿ ಪ್ರದೇಶ ವಿಸ್ತರಣೆಗಾಗಿ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಲಿದ್ದೇನೆ’ ಎಂದರು.

ಶಾಸಕರಾದ ಎ.ಆರ್‌. ಕೃಷ್ಣಮೂರ್ತಿ, ಎಚ್‌.ಎಂ. ಗಣೇಶ್‌ ಪ್ರಸಾದ್‌, ದರ್ಶನ್‌ ಪುಟ್ಟಣ್ಣಯ್ಯ, ಮಾಜಿ ಶಾಸಕ ಆರ್‌. ನರೇಂದ್ರ, ಕಾಂಗ್ರೆಸ್‌‍ ಮುಖಂಡರಾದ ಜಿ.ಎನ್‌. ನಂಜುಂಡಸ್ವಾಮಿ, ಕಾಗಲವಾಡಿ ಎಂ. ಶಿವಣ್ಣ, ಆರ್‌. ಮಹದೇವು, ಸದಾಶಿವಮೂರ್ತಿ, ಕೆರೆಹಳ್ಳಿ ನವೀನ್‌, ಸೈಯದ್‌ ರಫಿ ಮೊದಲಾದವರು ಪಾಲ್ಗೊಂಡು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.