ತಿ.ನರಸೀಪುರ: ತಾಲ್ಲೂಕಿನ ಮೂಗೂರು ಗ್ರಾಮದ ಪುರಾತನ ಪ್ರಸಿದ್ಧ ತ್ರಿಪುರ ಸುಂದರಿ ಅಮ್ಮನವರ ದೇವಾಲಯಕ್ಕೆ ಮೇಘಾಲಯ ರಾಜ್ಯಪಾಲ ಸಿ.ಹೆಚ್.ವಿಜಯಶಂಕರ್ ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯಪಾಲರಾಗಿ ಮೇಘಾಲಯಕ್ಕೆ ನೇಮಕಗೊಂಡ ಹಿನ್ನೆಲೆಯಲ್ಲಿ ಸಿ.ಹೆಚ್.ವಿಜಯಶಂಕರ್ ಮನೆ ದೇವರು ತ್ರಿಪುರ ಸುಂದರಿ ಅಮ್ಮನವರ ದರ್ಶನಕ್ಕೆ ಹಾಗೂ ವಿಶೇಷ ಪೂಜೆ ಸಲ್ಲಿಸಲು ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ವೇಳೆ ಅವರನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ತಾಲ್ಲೂಕು ಆಡಳಿತ ಹಾಗೂ ದೇವಾಲಯದ ಧರ್ಮದರ್ಶಿ ಮಂಡಳಿಯಿಂದಲೂ ಗೌರವ ಸ್ವಾಗತ ನೀಡಲಾಯಿತು.
ಬಳಿಕ ಕುಟುಂಬಸ್ಥರೊಂದಿಗೆ ತ್ರಿಪುರ ಸುಂದರಿ ಅಮ್ಮನವರ ಸನ್ನಿಧಿಯಲ್ಲಿ ಸಾಂಪ್ರದಾಯಿಕವಾಗಿ ಸಲ್ಲಿಸಿದರು. ಈ ವೇಳೆ ನಾಡಿನ ಒಳಿತಿಗೂ ಅಮ್ಮನವರಲ್ಲಿ ಪ್ರಾರ್ಥನೆ ಸಲ್ಲಿಸಿದರು.
ರಾಜ್ಯಪಾಲರ ಭೇಟಿ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ದೇವಾಲಯಕ್ಕೆ ಆಗಮಿಸಿ ರಾಜ್ಯಪಾಲರಾಗಿ ನಿಯೋಜನೆಗೊಂಡಿದ್ದರಿಂದ ಸಿ.ಎಚ್.ವಿಜಯಶಂಕರ್ ಅವರನ್ನು ಅಭಿನಂದಿಸಿದರು. ನಂತರ ಪಕ್ಷದ ಹಿರಿಯ ಕಾರ್ಯಕರ್ತರ ನಿವಾಸಕ್ಕೆ ಭೇಟಿ ನೀಡಿದರು.
ತಹಶೀಲ್ದಾರ್ ಟಿ.ಜಿ.ಸುರೇಶಾಚಾರ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಶಿವಕುಮಾರ್ (ಸತ್ಯಪ್ಪ), ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ದೇವಾಲಯದ ಪಾರು ಪತ್ತೆಗಾರ್ ಎಂ.ಬಿ.ಸಾಗರ್, ಡಾ.ರೇವಣ್ಣ ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್ಎಂಆರ್ ಪ್ರಕಾಶ್, ಮೂಗೂರು. ಎಂ.ಸಿದ್ದರಾಜು, ಕರೋಹಟ್ಟಿ ಮಹದೇವಯ್ಯ ಮುಖಂಡರಾದ ಎಂ.ಆರ್.ಸೋಮಣ್ಣ, ತೋಟದಪ್ಪ ಬಸವರಾಜು, ಪುರಸಭಾ ಸದಸ್ಯ ಎಸ್.ಕೆ.ಕಿರಣ್, ಮೂಗೂರು ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್, ಗ್ರಾಮಾಂತರ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಮ್ರಾಟ್ ಸುಂದರೇಶನ್, ಗೌಡ್ರು ಪ್ರಕಾಶ್, ಎಸ್.ಮಹದೇವಯ್ಯ, ಹಿರಿಯೂರು ಪರಶಿವಮೂರ್ತಿ, ಕೆ.ಜಿ.ವೀರಣ್ಣ ಕುರುಬೂರು ಶಿವು, ಚಂದ್ರಶೇಖರ್,ಎನ್.ಲೋಕೇಶ್, ತೊಟ್ಟವಾಡಿ ಅನಿಲ್ ಕುಮಾರ್, ತಾಲ್ಲೂಕು ಮಟ್ಟದ ಕೆಲ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.