ಮೈಸೂರು: ‘ಒತ್ತಡದ ರಾಜಕಾರಣಕ್ಕೆ ಧ್ರುವನಾರಾಯಣ ಬಲಿಯಾಗಿದ್ದಾರೆ’ ಎಂದು ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಆರೋಪಿಸಿದರು.
ಪಾರ್ಥಿವ ಶರೀರದ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ‘ದಲಿತ ಸಮುದಾಯಕ್ಕೆ ಒತ್ತಡ ತಡೆಯುವ ಶಕ್ತಿ ಇಲ್ಲ. ಎರಡು ಬಾರಿ ಸಂಸದರಾಗಿದ್ದರು. ಶಾಸಕರಾಗಲು ಇಷ್ಟೊಂದು ಒತ್ತಡ ತಗೆದುಕೊಳ್ಳಬೇಕಿತ್ತಾ? ಅವರು ಕೇಳಿದ ಕಡೆ ಟಿಕೆಟ್ ಘೋಷಿಸಬೇಕಿತ್ತು. ಕಾಂಗ್ರೆಸ್ ಪಕ್ಷದವರು ಒತ್ತಡ ಆಗುವಂತೆ ಮಾಡಬಾರದಿತ್ತು’ ಎಂದರು.
ಇದಕ್ಕೆ ಸ್ಥಳದಲ್ಲೇ ಆಕ್ಷೇಪ ವ್ಯಕ್ತಪಡಿಸಿದ ಡಾ.ಎಚ್.ಸಿ.ಮಹದೇವಪ್ಪ, ‘ಸಾವಿನ ಮನೆಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸಾರ್ವಜನಿಕ ಬದುಕಿನಲ್ಲಿ ಇರುವವರಿಗೆ ಒತ್ತಡ ಇದ್ದೇ ಇರುತ್ತದೆ. ಒತ್ತಡದ ನಡುವೆಯೇ ಕುಟುಂಬದ ಕಡೆಗೂ ಗಮನ ಕೊಟ್ಟು ರಾಜಕಾರಣ ಮಾಡಬೇಕಾಗುತ್ತದೆ’ ಎಂದು ಹೇಳಿದರು.
ಇವುಗಳನ್ನೂ ಓದಿ..
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.