ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮನ್‌ಕಿಬಾತ್’ ಕಾರ್ಯಕ್ರಮದಲ್ಲಿ, ಮಕ್ಕಳಿಗೆ ಪ್ರಕೃತಿ ಶಿಕ್ಷಣ ನೀಡುತ್ತಿರುವ ಇಲ್ಲಿನ ‘ಅರ್ಲಿ ಬರ್ಡ್’ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿ, ನಿಸರ್ಗದ ಮಹತ್ವ ತಿಳಿಸುತ್ತಿದೆ. ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದೊಯ್ದು ಪಕ್ಷಿ ಸಂಕುಲವನ್ನು ಪರಿಚಯಿಸುವ ಜೊತೆಗೆ, ಅವುಗಳಿಂದ ಆಗುವ ಪ್ರಯೋಜನಗಳ ಬಗ್ಗೆಯೂ ತಿಳಿಸುತ್ತಿದೆ. ಅವರನ್ನು ಉತ್ತಮ ನಾಗರಿಕರನ್ನಾಗಿಸಲು ಕೊಡುಗೆ ನೀಡುತ್ತಿದೆ. ವಿಶೇಷ ಗ್ರಂಥಾಲಯ ಹಾಗೂ ಸ್ಟೋರಿ ಬುಕ್‌ಗಳನ್ನು ಹೊಂದಿದೆ. ಶಿಕ್ಷಣ ತಜ್ಞರು ಮತ್ತು ಹವ್ಯಾಸಿ ಪಕ್ಷಿವೀಕ್ಷಕರಿಗೆ ತರಬೇತಿ ನೀಡುತ್ತಿದೆ’ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
‘ಸಂಸ್ಥೆಯು ಪ್ರಕೃತಿ ಶಿಕ್ಷಣದ ಕಿಟ್ ಸಿದ್ಧಪಡಿಸಿದೆ. ಕಥೆ ಪುಸ್ತಕ, ಗೇಮ್ಸ್‌ಗಳು, ಪಜ್‌ಲ್‌ಗಳು ಇವೆ. ಇಂತಹ ಪ್ರಯತ್ನಗಳನ್ನು ನಾವೂ ಮಕ್ಕಳ ಕಲಿಕೆಗಾಗಿ ಮಾಡಬೇಕು ಎಂದು ಸಲಹೆಯನ್ನೂ ಅವರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.