ADVERTISEMENT

ಸಂಗೀತಕ್ಕಿದೆ ನೋವು ಮರೆಸುವ ಶಕ್ತಿ: ಶಾಸಕ ಟಿ.ಎಸ್.ಶ್ರೀವತ್ಸ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 7:50 IST
Last Updated 21 ಅಕ್ಟೋಬರ್ 2024, 7:50 IST
ಮೈಸೂರಿನಲ್ಲಿ ಆಯೋಜಿಸಿದ್ದ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ಶಾಸಕ ಟಿ.ಎನ್. ಶ್ರೀವತ್ಸ ಉದ್ಘಾಟಿಸಿದರು
ಮೈಸೂರಿನಲ್ಲಿ ಆಯೋಜಿಸಿದ್ದ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ಶಾಸಕ ಟಿ.ಎನ್. ಶ್ರೀವತ್ಸ ಉದ್ಘಾಟಿಸಿದರು   

ಮೈಸೂರು: ಸಂಗೀತಕ್ಕೆ ನೋವನ್ನು ಮರೆಸುವ ಶಕ್ತಿ ಇದ್ದು, ಸಂಗೀತವನ್ನು ಅರಿತವರು ಆನಂದದಿಂದ ಇರುವರು. ಆದ್ದರಿಂದ ಎಲ್ಲರೂ ಸಂಗೀತವನ್ನು ಆಸ್ವಾದಿಸಬೇಕು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು.

ನಗರದ ಹೂಟಗಳ್ಳಿಯ ಬಿ.ಎನ್.ರಾವ್ ಸಭಾಂಗಣದಲ್ಲಿ ಕಲಾಭೂಮಿಯಿಂದ ನಡೆದ ಸ್ವರ ಸಂಭ್ರಮ ರಾಜ್ಯಮಟ್ಟದ ಕರೋಕೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು.

‘ಮೈಸೂರು ಕಲಾವಿದರ ತವರೂರು. ಇದಕ್ಕೆ ಸಂಗೀತದ ಶಕ್ತಿಯೇ ಕಾರಣ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸಲಿದ್ದು, ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಅವರ ಭವಿಷ್ಯ ಉಜ್ವಲವಾಗುತ್ತದೆ. ಆಕಾಶವಾಣಿ, ದೂರದರ್ಶನದ ಸಂಗೀತ ಕಾರ್ಯಕ್ರಮಗಳಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ’ ಎಂದು ಸ್ಮರಿಸಿದರು

ADVERTISEMENT

ಸಂಗೀತ ನಿರ್ದೇಶಕರಾದ ಲಯ ಕೋಕಿಲ ಮಾತನಾಡಿ, ‘ಸಂಗೀತದ ಯಾವುದೇ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳುವ ಅವಿರತ ಪ್ರಯತ್ನ ಇರಬೇಕು’ ಎಂದು ಹೇಳಿದರು

ಕಲಾಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆಸ್ಕರ್ ಕೃಷ್ಣ, ಗಾಯಕ ನಿಂಗರಾಜು, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ಮಂಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಎಸ್.ಇ, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಸಮೃದ್ಧಿ ವಾರ್ತೆ ಪತ್ರಿಕೆ ಸಂಸ್ಥಾಪಕರು ಸಹನಾ ಗೌಡ, ಮನೋರೋಗ ತಜ್ಞೆ ರೇಖಾ ಮನಶಾಂತಿ, ಉದ್ಯಮಿ ರಘುನಂದನ್, ಪ್ರಶಾಂತ್, ಮಂಜುಳಾ, ರುದ್ರೇಗೌಡ, ನಟಿ ಶಾಲಿನಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಲ್ತಾನ್, ರಂಗಭೂಮಿ ಕಲಾವಿದೆ ಕಾತ್ಯಾಯಿನಿ ಭಾಗವಹಿಸಿದ್ದರು.

ಕರೋಕೆ ಸ್ಪರ್ಧೆಯಲ್ಲಿ 50 ಹೆಚ್ಚು ಸ್ಪರ್ಧಿಗಳು ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.