ADVERTISEMENT

ನಿವೇಶನ ವಾಪಸ್‌ ಪಡೆಯಲು ಕ್ರಮ: ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2024, 15:57 IST
Last Updated 1 ನವೆಂಬರ್ 2024, 15:57 IST
ಡಾ.ಎಚ್‌.ಸಿ.ಮಹದೇವಪ್ಪ
ಡಾ.ಎಚ್‌.ಸಿ.ಮಹದೇವಪ್ಪ   

ಮೈಸೂರು: ‘ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಡಿ ನಡೆದಿರುವ ಹಂಚಿಕೆಯಲ್ಲಿ ಅಕ್ರಮ ಕಂಡು ಬಂದಿದ್ದರೆ ಅಂಥ ನಿವೇಶನಗಳನ್ನು ವಾಪಸ್‌ ಪಡೆಯಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಡಾ ಪ್ರಕರಣದ ತನಿಖೆ ನಡೆಯುತ್ತಿದ್ದು, ಅಕ್ರಮವಾಗಿದ್ದರೆ ನಿಶ್ಚಿತವಾಗಿ ಅವು ಕಾನೂನು ವ್ಯಾಪ್ತಿಗೆ ಬರಲಿವೆ’ ಎಂದರು. 

‘ಗ್ಯಾರಂಟಿ ಯೋಜನೆಯನ್ನು ಪರಿಷ್ಕರಿಸುವುದಿಲ್ಲ. ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಕೆಲವರಿಗೆ ವಿದ್ಯುತ್‌ ಬಿಲ್ ಕಟ್ಟಲು ಆಗುತ್ತದೆ. ಮತ್ತೆ ಕೆಲವರು ಬಸ್‌ ಟಿಕೆಟ್‌ ಹಣ ಕೊಡುತ್ತೇವೆನ್ನುತ್ತಾರೆ. ಅದು ಅವರಿಚ್ಛೆ. ಸರ್ಕಾರ ಎಲ್ಲರಿಗೂ ಯೋಜನೆಗಳನ್ನು ನೀಡಿದೆ’ ಎಂದರು.

ADVERTISEMENT

‘ಚನ್ನಪಟ್ಟಣ ಕ್ಷೇತ್ರದಲ್ಲಿ ಮತದಾರರಿಗೆ ಆಮಿಷವೊಡ್ಡಲಾಗಿರುವ ಬಗ್ಗೆ ಚುನಾವಣಾ ಆಯೋಗವು ಕ್ರಮವಹಿಸಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.