ADVERTISEMENT

ರಾಜ್ಯಪಾಲರಲ್ಲ, ಕೇಂದ್ರಪಾಲರೆನ್ನಿ: ಹಂಸಲೇಖ ವ್ಯಂಗ್ಯ

ರಾಜ್ಯಪಾಲರ ನಡೆ ಖಂಡಿಸಿ ‘ಕರ್ನಾಟಕ ಜನರಂಗ’ದಿಂದ ಅಹೋರಾತ್ರಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 22:42 IST
Last Updated 24 ಆಗಸ್ಟ್ 2024, 22:42 IST
   

ಮೈಸೂರು: ‘ಕೇಂದ್ರ ಸರ್ಕಾರದ ಆದೇಶದಂತೆ ವರ್ತಿಸುತ್ತಿರುವ ರಾಜ್ಯಪಾಲರನ್ನು ಕೇಂದ್ರಪಾಲ ಎಂದೇ ಕರೆಯುವುದು ಸೂಕ್ತ’ ಎಂದು ಚಲನಚಿತ್ರ ಸಂಗೀತ ನಿರ್ದೇಶಕ ಹಂಸಲೇಖ ವ್ಯಂಗ್ಯವಾಡಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ತನಿಖೆಗೆ ಅನುಮತಿಸಿರುವ ರಾಜ್ಯಪಾಲರ ನಡೆ ಖಂಡಿಸಿ ‘ಕರ್ನಾಟಕ ಜನರಂಗ’ ನಗರದ ಚಿಕ್ಕಗಡಿಯಾರದಲ್ಲಿ ಶನಿವಾರ ಸಂಜೆ ಆರಂಭಿಸಿದ 24 ಗಂಟೆಗಳ ಅಹೋರಾತ್ರಿ ಧರಣಿಗೆ ಚಾಲನೆ ನೀಡಿ ಮಾತನಾಡಿದರು.

‘ತನಿಖೆಗೆ ಅನುಮತಿ ನೀಡಿದ ನಂತರ ರಾಜ್ಯಪಾಲರಿಗೆ ‘ಝಡ್‌’ ಶ್ರೇಣಿ ಭದ್ರತೆ ನೀಡಲಾಗಿದೆ. ಭದ್ರತೆ ನೀಡಬೇಕಿರುವುದು ಸಂವಿಧಾನಕ್ಕೆ. ಜನರೇ ‘ಎ ಟು ಝಡ್‌’ ಭದ್ರತೆ ನೀಡಲಿದ್ದಾರೆ’ ಎಂದರು.

ADVERTISEMENT

ಲೇಖಕ ಪ್ರೊ.ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ‘ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ, ಇದೇ ರಾಜ್ಯಪಾಲ ಹುದ್ದೆಗಳನ್ನು ದುರ್ಬಳಕೆ ಮಾಡಿದಾಗಲೂ ಖಂಡಿಸಿದ್ದೇವೆ’ ಎಂದು ಹೇಳಿದರು.

ಸಬಿಹಾ ಭೂಮಿಗೌಡ, ಟಿ.ಗುರುರಾಜ್, ಎಚ್‌.ಜನಾರ್ಧನ್, ಗೋಪಾಲಕೃಷ್ಣ, ಕೆ.ಎಸ್‌.ಶಿವರಾಮ್, ಕಾಳಚನ್ನೇಗೌಡ, ಸವಿತಾ ಪ.ಮಲ್ಲೇಶ್, ನಾ.ದಿವಾಕರ, ರವಿರಾವ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.