ADVERTISEMENT

ಸಂಗೀತ ವಿವಿ: ವಿವಿಧ ಸಂಸ್ಥೆಯೊಂದಿಗೆ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 15:57 IST
Last Updated 11 ಜುಲೈ 2024, 15:57 IST
ಮೈಸೂರಿನ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ವಿವಿಧ ಸಂಸ್ಥೆಗಳೊಂದಿಗೆ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಅಧ್ಯಕ್ಷತೆಯಲ್ಲಿ ಗುರುವಾರ ಒಡಂಬಡಿಕೆ ಪ್ರಕ್ರಿಯೆ ನಡೆಸಲಾಯಿತು
ಮೈಸೂರಿನ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ವಿವಿಧ ಸಂಸ್ಥೆಗಳೊಂದಿಗೆ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಅಧ್ಯಕ್ಷತೆಯಲ್ಲಿ ಗುರುವಾರ ಒಡಂಬಡಿಕೆ ಪ್ರಕ್ರಿಯೆ ನಡೆಸಲಾಯಿತು   

ಮೈಸೂರು: ಇಲ್ಲಿನ ರಾಜ್ಯ ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯವು ಸಂಗೀತ ಮತ್ತು ಪ್ರದರ್ಶಕ ಕಲೆಗಳ ಹಲವು ಪ್ರಾಕಾರಗಳಲ್ಲಿ ಶಿಕ್ಷಣ ನೀಡುವ ಧ್ಯೇಯದೊಂದಿಗೆ ವಿವಿಧ ಸಂಸ್ಥೆಗಳೊಂದಿಗೆ ಕುಲಪತಿ ಪ್ರೊ.ನಾಗೇಶ್ ಬೆಟ್ಟಕೋಟೆ ಅಧ್ಯಕ್ಷತೆಯಲ್ಲಿ ಒಡಂಬಡಿಕೆ ಪ್ರಕ್ರಿಯೆಯನ್ನು ಗುರುವಾರ ನಡೆಸಲಾಯಿತು.

ಶಿವಮೊಗ್ಗದ ವಿಜಯ ಕಲಾನಿಕೇತನ, ಕೊಪ್ಪಳದ ವಿಸ್ತಾರ ರಂಗಶಾಲೆ, ಮೈಸೂರಿನ ನೃತ್ಯವರ್ಣಕಲಾ ಸೌರಭ ಟ್ರಸ್ಟ್‌, ಬೆಂಗಳೂರಿನ ಮೇಧ ಕಾಲೇಜ್ ಆಫ್‌ ಪರ್ಫಾರ್ಮಿಂಗ್‌ ಆರ್ಟ್ಸ್‌, ಎಬಿಲಿಟಿ ಆನ್ ಲಿಮಿಟೆಡ್ ಟ್ರಸ್ಟ್‌, ರುದ್ರ ಅಕಾಡೆಮಿ, ಶಾಂಭವಿ ಸ್ಕೂಲ್ ಆಫ್‌ ಡ್ಯಾನ್ಸ್, ಆಡಿಯೊ ಲೈಫ್ ಆಫ್‌ ಎಂಜಿನಿಯರಿಂಗ್‌ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 39 ಸಂಸ್ಥೆಗಳೊಂದಿಗೆ ಒಪ್ಪಂದವಾಗಿದ್ದು, ಇದರೊಂದಿಗೆ 49 ಸಂಸ್ಥೆಗಳೊಂದಿಗೆ ಪೂರ್ಣವಾದಂತಾಗಿದೆ.

‘ಇದರಿಂದಾಗಿ ವಿಶ್ವವಿದ್ಯಾಲಯವು ರಾಜ್ಯದಾದ್ಯಂತ ತನ್ನ ಕೇಂದ್ರಗಳನ್ನು ಸ್ಥಾಪಿಸಿ ಸಂಗೀತಾದಿ ಪ್ರದರ್ಶನ ಕಲೆಗಳ ಶಿಕ್ಷಣ ನೀಡುವುದಕ್ಕೆ ಮಹತ್ತರವಾದ ಹೆಜ್ಜೆ ಇಟ್ಟಂತಾಗಿದೆ’ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.