ADVERTISEMENT

ಮೈಸೂರು: ‘ಮಾದರಿ ಮೈಸೂರು ಚಾಮರಾಜರ ದೂರದೃಷ್ಟಿ’

ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್‌.ಎಲ್‌.ಯಮುನಾ ಅಭಿಮತ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 4:45 IST
Last Updated 23 ಫೆಬ್ರುವರಿ 2023, 4:45 IST
ಮೈಸೂರಿನ ಚಾಮರಾಜ ವೃತ್ತದಲ್ಲಿ ಬುಧವಾರ ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಆಯೋಜಿಸಿದ್ದ ಹತ್ತನೇ ಚಾಮರಾಜ ಒಡೆಯರ್‌ ಅವರ 160ನೇ ಜಯಂತಿಯಲ್ಲಿ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಅವರನ್ನು ಮೇಯರ್‌ ಶಿವಕುಮಾರ್‌ ಸನ್ಮಾನಿಸಿದರು
ಮೈಸೂರಿನ ಚಾಮರಾಜ ವೃತ್ತದಲ್ಲಿ ಬುಧವಾರ ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಆಯೋಜಿಸಿದ್ದ ಹತ್ತನೇ ಚಾಮರಾಜ ಒಡೆಯರ್‌ ಅವರ 160ನೇ ಜಯಂತಿಯಲ್ಲಿ ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಅವರನ್ನು ಮೇಯರ್‌ ಶಿವಕುಮಾರ್‌ ಸನ್ಮಾನಿಸಿದರು   

ಮೈಸೂರು: ‘ಹತ್ತನೇ ಚಾಮರಾಜ ಒಡೆಯರ್‌ ದೂರದೃಷ್ಟಿ ಯೋಜನೆಗಳ ಮೂಲಕ ಮೈಸೂರು ಮಾದರಿ ಸಂಸ್ಥಾನವಾಗಲು ಅಡಿಪಾಯವನ್ನು ಹಾಕಿದವರು’ ಎಂದು ರಾಜ್ಯ ಒಕ್ಕಗಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಎಚ್‌.ಎಲ್‌.ಯಮುನಾ ಹೇಳಿದರು.

ನಗರದ ಚಾಮರಾಜ ವೃತ್ತದಲ್ಲಿ ಬುಧವಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಹತ್ತನೇ ಚಾಮರಾಜ ಒಡೆಯರ್‌ ಅವರ 160ನೇ ಜಯಂತಿಯಲ್ಲಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

‘ಸಂಸ್ಥಾನದಲ್ಲಿ ಹಾಕಿದ ರೈಲ್ವೆ ಮಾರ್ಗಗಳು ಈಗಲೂ ಬಳಕೆಯಾಗುತ್ತಿವೆ. ಪ್ರಜಾಪ್ರತಿನಿಧಿ ಸಭೆ ಸ್ಥಾಪಿಸಿದರು. ರೈಲ್ವೆ, ಮೃಗಾಲಯ ಸೇರಿದಂತೆ ಕೈಗೊಂಡ ಹತ್ತಾರು ಯೋಜನೆಗಳು ಸಂಸ್ಥಾನವು ಪ್ರಗತಿಯ ಹಾದಿ ತೋರಿದವು’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘31ನೇ ವಯಸ್ಸಿಗೆ ನಿಧನರಾದ ಬಳಿಕ ಪತ್ನಿ ಕೆಂಪನಂಜಮ್ಮಣ್ಣಿ, ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಮಾರ್ಗದಲ್ಲಿಯೇ ಸಂಸ್ಥಾನದ ಜನರ ಕಲ್ಯಾಣಕ್ಕೆ ಶ್ರಮಿಸಿದರು’ ಎಂದು ಸ್ಮರಿಸಿದರು.

‘ಚಾಮರಾಜರ ಜಯಂತಿಯನ್ನು ವೇದಿಕೆ ವತಿಯಿಂದ ಪ್ರತಿ ವರ್ಷ ಆಚರಿಸಲಾಗುತ್ತಿದೆ. ಎಲ್‌ಐಸಿ ವೃತ್ತದಲ್ಲಿ ಕೆಂಪನಂಜಮ್ಮಣ್ಣಿ ಪ್ರತಿಮೆ ಸ್ಥಾಪಿಸಬೇಕು’ ಎಂದರು.

ಇತಿಹಾಸ ತಜ್ಞ ಪ್ರೊ.ಎನ್‌.ಎಸ್‌.ರಂಗರಾಜು ಅವರನ್ನು ವೇದಿಕೆಯು ಸನ್ಮಾನಿಸಿತು.

ಮೇಯರ್ ಶಿವಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮುಖಂಡರಾದ ಎಚ್.ಕೆ.ರಾಮು, ಸುನಿಲ್, ರವಿ, ದ್ಯಾವಪ್ಪನಾಯಕ, ಎಂ.ಚಂದ್ರಶೇಖರ್, ಲೋಕೇಶ್ ಕುಮಾರ್ ಮಾದಾಪುರ, ಸೋಸಲೆ ಸಿದ್ದರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.