ಮೈಸೂರು: ‘ಮೈಸೂರು ಪಾಕ್’ ಸಿಹಿ ತಿನಿಸಿನ ಭೌಗೋಳಿಕ ಸೂಚಿಪಡೆಯಲು ಅರ್ಜಿ ಹಾಕುವುದಾಗಿ ‘ಮೈಸೂರು ಪಾಕ್’ನ್ನು ಮೊದಲಿಗೆ ತಯಾರಿಸಿದ ಕಾಕಾಸುರ ಮಾದಪ್ಪ ಅವರ ಮರಿಮೊಮ್ಮಗ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘1937ರಲ್ಲಿ ನಮ್ಮ ಮುತ್ತಾತ ಕಾಕಾಸುರ ಮಾದಪ್ಪ ಅವರು ಈ ಸಿಹಿ ತಿನಿಸನ್ನು ಅರಮನೆಯಲ್ಲಿ ತಯಾರಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇದಕ್ಕೆ ‘ಮೈಸೂರು ಪಾಕ’ ಎಂದು ಹೆಸರಿಟ್ಟರು. ಇದರ ಭೌಗೋಳಿದ ಸೂಚಿತಮಿಳುನಾಡಿನ ಪಾಲಾಗುವುದಕ್ಕೆ ಬಿಡಬಾರದು. ಹಣಕ್ಕಾಗಿ ನಾನು ಅರ್ಜಿ ಹಾಕುತ್ತಿಲ್ಲ. ನಮ್ಮ ಮೈಸೂರಿನ ಹೆಮ್ಮೆ ಉಳಿಯಲಿ ಎಂದು ಹಾಕುತ್ತೇನೆ’ ಎಂದು ಹೇಳಿದ್ದಾರೆ.
‘ಮೈಸೂರು ಪಾಕ್’ ತಮಿಳುನಾಡಿನದು ಎಂದು ಭೌಗೋಳಿಕ ಸೂಚಿ ಪಡೆಯಲಾಗಿದೆ ಎಂದು ತಮಿಳುನಾಡಿನ ಲೇಖಕ ಆನಂದ್ ರಂಗನಾಥನ್ ಸೋಮವಾರವಷ್ಟೇ ಟ್ವೀಟ್ ಮಾಡಿ, ನಂತರ ಇದು ತಮಾಷೆಗಾಗಿ ಎಂದು ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.