ADVERTISEMENT

ಮೈಸೂರು ವಿಶ್ವವಿದ್ಯಾಲಯದ ಶ್ರೇಯಾಂಕದಲ್ಲಿ ಕುಸಿತ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 4:51 IST
Last Updated 8 ಜೂನ್ 2023, 4:51 IST
ಮೈಸೂರು ವಿ.ವಿ ಕ್ರಾಫರ್ಡ್‌ ಭವನ
ಮೈಸೂರು ವಿ.ವಿ ಕ್ರಾಫರ್ಡ್‌ ಭವನ   

ಮೈಸೂರು: ಮೈಸೂರು ವಿಶ್ವವಿದ್ಯಾಲಯ ದಲ್ಲಿ ಬೋಧನಾ ಸಿಬ್ಬಂದಿಯ ಕೊರತೆ ತೀವ್ರವಾಗಿದ್ದು, ಇದು ವಿಶ್ವವಿದ್ಯಾಲಯದ ಶಿಕ್ಷಣದ ಗುಣಮಟ್ಟದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಈ ವರ್ಷದ ಎನ್‌ಐಆರ್‌ಎಫ್‌ ಶ್ರೇಯಾಂಕದಲ್ಲಿ ವಿಶ್ವವಿದ್ಯಾಲಯವು 34ರಿಂದ 44ನೇ ಸ್ಥಾನಕ್ಕೆ ಕುಸಿದಿದೆ.

ವಿಶ್ವವಿದ್ಯಾಲಯದಲ್ಲಿನ ಶಿಕ್ಷಣ ಮತ್ತು ಕಲಿಕೆ ಗುಣಮಟ್ಟ, ಬೋಧನಾ ಸಿಬ್ಬಂದಿ, ಸಂಶೋಧನೆ ಮೊದಲಾದ ಮಾನದಂಡ ಗಳನ್ನು ಆಧರಿಸಿ ಎನ್‌ಐಆರ್‌ಎಫ್‌ ರ್‍ಯಾಂಕಿಂಗ್‌ ನೀಡಲಾಗುತ್ತಿದೆ. ಆದಾಗ್ಯೂ ರಾಜ್ಯದಲ್ಲಿ 50 ರ್‍ಯಾಂಕಿಂಗ್‌ ಒಳಗೆ ಸ್ಥಾನ ಪಡೆದಿರುವ ಏಕೈಕ ವಿ.ವಿ. ಮೈಸೂರು ಎಂಬುದೇ ಸಮಾಧಾನದ ಸಂಗತಿ. 1916ರಲ್ಲಿ ಸ್ಥಾಪನೆಗೊಂಡ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ನೀಡುವಲ್ಲಿ ದೇಶದಲ್ಲಿಯೇ ಉತ್ತಮ ಸ್ಥಾನ ಪಡೆದಿರುವ ವಿ.ವಿ.ಗಳ ಪಟ್ಟಿಯಲ್ಲಿದ್ದು, 2021ರಲ್ಲಿ 19ನೇ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದಿತ್ತು.

ಸಿಬ್ಬಂದಿ ಕೊರತೆ:

ADVERTISEMENT

ಸದ್ಯ ವಿಶ್ವ ವಿದ್ಯಾಲಯದ ಬೋಧನಾ ವಿಭಾಗದಲ್ಲಿ ಶೇ 43ರಷ್ಟು ಮಾತ್ರವೇ ಕಾಯಂ ಸಿಬ್ಬಂದಿ ಇದ್ದಾರೆ. ಉಳಿದ ಹುದ್ದೆಗಳು ಖಾಲಿ ಇವೆ. ಕಳೆದ 15 ವರ್ಷಗಳಿಂದ ಕಾಯಂ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ ಬಹುತೇಕ ವಿಭಾಗಗಳಲ್ಲಿ ಅತಿಥಿ ಉಪನ್ಯಾಸಕರು, ಪ್ರಾಧ್ಯಾಪಕರ ಮೂಲಕ ಪಾಠಗಳು ನಡೆದಿವೆ. ಅಧ್ಯಯನ ಮತ್ತು ಸಂಶೋಧನೆಗಳಿಗೂ ಇದರಿಂದ ಅಡ್ಡಿಯಾಗಿದೆ.

ವಿವಿಯಲ್ಲಿ ಬೋಧನಾ ಸಿಬ್ಬಂದಿ ಕೊರತೆ ರ್‍ಯಾಂಕಿಂಗ್‌ ಇಳಿಕೆಗೆ ಮುಖ್ಯ ಕಾರಣ. ಇದೊಂದು ಎಚ್ಚರಿಕೆ ಗಂಟೆ ಎಂದು ಭಾವಿಸಿ ಗುಣಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ
ಪ್ರೊ.ಎನ್‌.ಕೆ.ಲೋಕನಾಥ್‌, ಕುಲಪತಿ ಮೈಸೂರು ವಿ.ವಿ

ಇನ್ನೊಂದೆಡೆ, ವಿಶ್ವವಿದ್ಯಾಲಯಕ್ಕೆ ಸಿಗುತ್ತಿರುವ ಅನುದಾನದ ಪೈಕಿ ಬಹುಪಾಲು ಹಣ ಸಿಬ್ಬಂದಿಯ ವೇತನ ಹಾಗೂ ನಿವೃತ್ತರ ಪಿಂಚಣಿಗೆ ಖರ್ಚಾಗುತ್ತಿದ್ದು, ಶೈಕ್ಷಣಿಕ ಚಟುವಟಿಕೆ ಗಳಿಗೆ ಅಲ್ಪ ಪ್ರಮಾಣದ ಹಣ ಮಾತ್ರ ಉಳಿಯುತ್ತಿದೆ. ಸದ್ಯ ಮೈಸೂರಿನವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಈಗಾಲಾದರೂ ವಿಶ್ವ ವಿದ್ಯಾಲಯಕ್ಕೆ ಅವಶ್ಯವಾದ ಸಿಬ್ಬಂದಿ ನೇಮಕದ ಜೊತೆಗೆ ಅನುದಾನವೂ ಹೆಚ್ಚಬಹುದು ಎನ್ನುವ ಆಶಾಭಾವ ವಿ.ವಿ. ಅಧಿಕಾರಿಗಳದ್ದು.

ಸದ್ಯಕ್ಕಿಲ್ಲ ಹೊಸ ಕೋರ್ಸ್

ಹಲವು ಅಧ್ಯಯನ ಪೀಠಗಳು ಹಾಗೂ ವಿಶಿಷ್ಟ ಬಗೆಯ ಕೋರ್ಸ್‌ಗಳಿಂದ ಗಮನ ಸೆಳೆದಿರುವ ಮೈಸೂರು ವಿಶ್ವವಿದ್ಯಾಲಯದಲ್ಲಿ ಸದ್ಯಕ್ಕೆ ಯಾವುದೇ ಹೊಸ ಕೋರ್ಸ್‌ ಆರಂಭ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಯಲ್ಲಿ ಬೋಧನಾ ಸಿಬ್ಬಂದಿ ಕೊರತೆ ರ್‍ಯಾಂಕಿಂಗ್‌ ಇಳಿಕೆಗೆ ಮುಖ್ಯ ಕಾರಣ. ಇದೊಂದು ಎಚ್ಚರಿಕೆ ಗಂಟೆ ಎಂದು ಭಾವಿಸಿ ಗುಣಮಟ್ಟ ವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.