ಮೈಸೂರು: ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಕ್ರೀಡಾಪಟುಗಳು ಅ.28ರಿಂದ 30ರವರೆಗೆ ನಡೆದ ಮೈಸೂರು ವಿಶ್ವವಿದ್ಯಾಲಯ ಮಟ್ಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ತೋರಿದ್ದಾರೆ.
ಜಿಮ್ನಾಸ್ಟಿಕ್‌ನಲ್ಲಿ ಕಾಲೇಜಿನ ತಂಡವು ಸಮಗ್ರ ಪ್ರಶಸ್ತಿ ಪಡೆದಿದೆ. ಕರಾಟೆ, ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿಯೂ ಪ್ರಥಮ ಸ್ಥಾನದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಸತತ ಎರಡು ವರ್ಷ ತನ್ನ ಮುಡಿಗೇರಿಸಿಕೊಂಡಿದೆ. ಮೂರು ದಿನಗಳವರೆಗೆ ನಡೆದ ಸ್ಪರ್ಧೆಯಲ್ಲಿ ಒಟ್ಟು 29 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ಕಿಕ್ ಬಾಕ್ಸಿಂಗ್‌ನ 70 ಕೆ.ಜಿ. ವಿಭಾಗದಲ್ಲಿ ಎಚ್.ಎನ್. ಪುಷ್ಪಲತಾ, 75 ಕೆ.ಜಿ. ವಿಭಾಗದಲ್ಲಿ ತೇಜಶ್ರೀ ಭೋಜೇಗೌಡ, 55 ಕೆ.ಜಿ. ವಿಭಾಗದಲ್ಲಿ ಕೆ. ರೇಖಾ ಹಾಗೂ 45 ಕೆ.ಜಿ. ವಿಭಾಗದಲ್ಲಿ ವಿ. ಲಕ್ಷ್ಮಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ. 60 ಕೆ.ಜಿ. ವಿಭಾಗದಲ್ಲಿ ಐಮಾನ್ ಹಾಗೂ 45 ಕೆ.ಜಿ. ವಿಭಾಗದಲ್ಲಿ ಪ್ರತಿಭಾ ಬೆಳ್ಳಿ ಪದಕ ಪಡೆದಿದ್ದಾರೆ. ಕರಾಟೆಯಲ್ಲಿ ತೇಜಶ್ರೀ ಭೋಜೇಗೌಡ ಚಿನ್ನ ಹಾಗೂ ಎಚ್.ಎನ್. ಪುಷ್ಪಲತಾ ಬೆಳ್ಳಿ ಪದಕ ಪಡೆದಿದ್ದಾರೆ.
ಜಿಮ್ನಾಸ್ಟಿಕ್‌ನಲ್ಲಿ ಎಚ್.ಪಿ. ಸಿಂಚನಾ ಒಂದು ಚಿನ್ನ, ಎರಡು ಬೆಳ್ಳಿ , ಬಿ.ಆರ್. ಶ್ರೀರಕ್ಷಾ ಒಂದು ಚಿನ್ನ ಒಂದು ಬೆಳ್ಳಿ ಹಾಗೂ ಸಿ.ಪುಷ್ಪಾ ಕಂಚಿನ ಪದಕ ಪಡೆದಿದ್ದಾರೆ. ಕುಸ್ತಿಯಲ್ಲಿ 59 ಕೆ.ಜಿ. ವಿಭಾಗದಲ್ಲಿ ಸಿ. ಪುಷ್ಪಾ ಹಾಗೂ 67 ಕೆ.ಜಿ. ವಿಭಾಗದಲ್ಲಿ ಎಂ.ಟಿ. ಪ್ರಣತಿ ಬೆಳ್ಳಿ ಪದಕ ಗಳಿಸಿದ್ದಾರೆ. ಈಜು ಸ್ಪರ್ಧೆಯಲ್ಲಿ ಎಂ.ಎಸ್. ಅನಿತಾ ಎರಡು ಬೆಳ್ಳಿ, ಎರಡು ಕಂಚು ಹಾಗೂ ಸಿ. ರಕ್ಷಾ ಎರಡು ಬೆಳ್ಳಿ, ಒಂದು ಕಂಚಿನ ಪದಕ ಪಡೆದಿದ್ದಾರೆ.
ವೇಟ್‌ಲಿಫ್ಟಿಂಗ್‌ನ 55 ಕೆ.ಜಿ. ವಿಭಾಗದಲ್ಲಿ ಶ್ರೀರಕ್ಷಾ, 65 ಕೆ.ಜಿ. ವಿಭಾಗದಲ್ಲಿ ಸಿಂಧು ಹಾಗೂ 80 ಕೆ.ಜಿ. ಮೇಲ್ಪಟ್ಟವರ ವಿಭಾಗದಲ್ಲಿ ಬಿಂದುಶ್ರೀ ಬೆಳ್ಳಿ ಗೆದ್ದರೆ, 59 ಕೆ.ಜಿ. ವಿಭಾಗದಲ್ಲಿ ಸಿ.ರಕ್ಷಿತಾ ಹಾಗೂ 50 ಕೆ.ಜಿ. ವಿಭಾಗದಲ್ಲಿ ಪಿ.ರಂಜಿತಾ ಕಂಚಿನ ಪದಕ ಪಡೆದಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲೆ ಎಂ. ವಿಜಯಮ್ಮ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಎಸ್. ಭಾಸ್ಕರ್, ಸಿ.ಎಸ್. ಮೋಹನ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.