ADVERTISEMENT

ಮೈಸೂರು ದಸರೆಗೆ ನಾಡಕುಸ್ತಿಯ ರಂಗು | ವಿಕಾಸ್ ಪಟ್ಟು: ರಾಘವೇಂದ್ರ ಚಿತ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 22:57 IST
Last Updated 3 ಅಕ್ಟೋಬರ್ 2024, 22:57 IST
<div class="paragraphs"><p>ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ದಸರಾ ನಾಡಕುಸ್ತಿಯ ಉದ್ಘಾಟನಾ ಪಂದ್ಯದಲ್ಲಿ ಮೈಸೂರಿನ ವಿಕಾಸ್‌ ಅವರು ದಾವಣಗೆರೆಯ ರಾಘವೇಂದ್ರ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಕ್ಷಣ</p></div>

ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಗುರುವಾರ ಆರಂಭಗೊಂಡ ದಸರಾ ನಾಡಕುಸ್ತಿಯ ಉದ್ಘಾಟನಾ ಪಂದ್ಯದಲ್ಲಿ ಮೈಸೂರಿನ ವಿಕಾಸ್‌ ಅವರು ದಾವಣಗೆರೆಯ ರಾಘವೇಂದ್ರ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ ಕ್ಷಣ

   

– ಪ್ರಜಾವಾಣಿ ಚಿತ್ರ/ ಹಂಪಾ ನಾಗರಾಜು

ಮೈಸೂರು: ದಸರಾ ಉತ್ಸವದಲ್ಲಿ ನಾಡಕುಸ್ತಿ ರಂಗೇರಿದ್ದು, ಸ್ಥಳೀಯ ಪೈಲ್ವಾನ್‌ ವಿಕಾಸ್ ಅವರು ಗುರುವಾರ ಇಲ್ಲಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆರಂಭಗೊಂಡ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ದಾವಣಗೆರೆ ಕ್ರೀಡಾ ನಿಲಯದ ರಾಘವೇಂದ್ರ ವಿರುದ್ಧ ಜಯಿಸಿದರು.

ADVERTISEMENT

ಒಂದು ಗಂಟೆ ನಡೆದ ಮಾರ್ಫಿಟ್‌ ಕುಸ್ತಿಯಲ್ಲಿ ಉಭಯ ಪೈಲ್ವಾನರೂ ಪ್ರಬಲ ಪೈಪೋಟಿ ತೋರಿದರು. ಈ ಜಟ್ಟಿಗಳ ಪಟ್ಟುಗಳನ್ನು ಕಂಡು ಪ್ರೇಕ್ಷಕರು ‘ಚಿತ್‌’ ಆದರು. ನಿಗದಿತ ಅವಧಿಯಲ್ಲಿ ಫಲಿತಾಂಶ ಬಾರದ ಕಾರಣ ಮಾರ್ಫಿಟ್ ಕುಸ್ತಿಯನ್ನು 5 ನಿಮಿಷ ಅವಧಿಯ ಪಾಯಿಂಟ್‌ ಕುಸ್ತಿಯನ್ನಾಗಿ ಪರಿವರ್ತಿಸ ಲಾಯಿತು. 4ನೇ ನಿಮಿಷದಲ್ಲಿ ವಿಕಾಸ್‌ ಎದುರಾಳಿಯನ್ನು ಕೆಡವಿ 2 ಅಂಕ ಗಳಿಸುವ ಮೂಲಕ ಜಯಿಸಿದರು.

ಮಹಿಳೆಯರ ಕುಸ್ತಿಯಲ್ಲಿ ಮೈಸೂರಿನ ಗಾಣಿಗರಕೊಪ್ಪಲಿನ ನಂದಿನಿ ಗೆಲುವಿನ ನಗೆ ಬೀರಿದರು. ಅವರು ಮಳವಳ್ಳಿಯ ಮೋನಿಕಾ ಅವರನ್ನು ಕೇವಲ 1ನಿಮಿಷ, 40 ಸೆಕೆಂಡುಗಳಲ್ಲಿ ಮಣಿಸಿದರು. ಮತ್ತೊಂದು ಪಂದ್ಯದಲ್ಲಿ ಮೈಸೂರಿನ ಯಶಸ್ವಿನಿ ಮಂಡ್ಯದ ಸುಹಾನ ಅವರನ್ನು 2ನಿಮಿಷ, 30 ಸೆಕೆಂಡುಗಳಲ್ಲಿ
ಪರಾಭವಗೊಳಿಸಿದರು.

ಅ.9 ರವರೆಗೂ ದಸರಾ ನಾಡಕುಸ್ತಿ, ಪಂಜಾ ಕುಸ್ತಿ ಮತ್ತು ಪಾಯಿಂಟ್ ಕುಸ್ತಿಗಳು ನಡೆಯಲಿವೆ. ರಾಜ್ಯಮಟ್ಟ ದಲ್ಲಿ ‘ದಸರಾ ಕಿಶೋರ’ (57 ರಿಂದ 65 ಕೆ.ಜಿ.) ಮತ್ತು ‘ದಸರಾ ಕಿಶೋರಿ’ (57 ರಿಂದ 62 ಕೆ.ಜಿ) ಕುಸ್ತಿ ಆಯೋಜಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.