ADVERTISEMENT

Mysuru Dasara | ಸ್ತಬ್ಧಚಿತ್ರ: ಮಂಡ್ಯಕ್ಕೆ ಪ್ರಥಮ ಬಹುಮಾನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2024, 13:58 IST
Last Updated 14 ಅಕ್ಟೋಬರ್ 2024, 13:58 IST
ಮೈಸೂರಿನಲ್ಲಿ ಶನಿವಾರ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಸ್ತಬ್ಧಚಿತ್ರ
ಮೈಸೂರಿನಲ್ಲಿ ಶನಿವಾರ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಂಡ್ಯದ ಸ್ತಬ್ಧಚಿತ್ರ   

ಮೈಸೂರು: ಇಲ್ಲಿ ದಸರಾ ಮಹೋತ್ಸವದ ಅಂಗವಾಗಿ ನಡೆದ ವಿಜಯದಶಮಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸ್ತಬ್ಧಚಿತ್ರಗಳಿಗೆ ಬಹುಮಾನ ಪ್ರಕಟಿಸಲಾಗಿದೆ.

ಜಿಲ್ಲೆಗಳ ವಿಭಾಗದಲ್ಲಿ ಮಂಡ್ಯ (ರಂಗನತಿಟ್ಟು ಪಕ್ಷಿಧಾಮ ಹಾಗೂ ಕೆಆರ್‌ಎಸ್‌ ಅಣೆಕಟ್ಟು) ಪ್ರಥಮ ಸ್ಥಾನ ಗಳಿಸಿದೆ. ಧಾರವಾಡ (ಇಸ್ರೊ ಗಗನಯಾನದಲ್ಲಿ ಹಣ್ಣಿನ ನೊಣಗಳು) ದ್ವಿತೀಯ, ಚಾಮರಾಜನಗರ (ಸೋಲಿಗರ ಸೊಗಡು ಒಮ್ಮೆ ನೀ ಬಂದು ನೋಡು) ತೃತೀಯ ಹಾಗೂ ಉಡುಪಿ (ಸಾಂಸ್ಕೃತಿಕ ವೈಭವ ಹಾಗೂ ಕರಾವಳಿಯ ಸೊಬಗು), ಗದಗ (ಗ್ರಾಮಸಭೆ–ಹಳ್ಳಿಯ ವಿಧಾನಸಭೆ), ಮೈಸೂರು (ಮಾನವ ಕುಲದ ಸಮಾನತೆ–ಧಾರ್ಮಿಕ ಬೆಳಕಿನಿಂದ ಸಾಂವಿಧಾನಿಕ ನ್ಯಾಯದವರೆಗೆ) ಹಾಗೂ ಚಿಕ್ಕಮಗಳೂರು (ತೇಜಸ್ವಿ ವಿಸ್ಮಯ ಲೋಕ) ಸಮಾಧಾನಕರ ಬಹುಮಾನ ಗಳಿಸಿವೆ.

ಇಲಾಖೆ, ನಿಗಮ ಹಾಗೂ ಮಂಡಳಿಗಳ ವಿಭಾಗದಲ್ಲಿ ವಾರ್ತಾ ಇಲಾಖೆ (ಪ್ರಥಮ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ (ದ್ವಿತೀಯ), ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ತೃತೀಯ) ಹಾಗೂ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ, ಕಾರ್ಮಿಕ ಇಲಾಖೆ ಹಾಗೂ ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ (ಸಮಾಧಾನಕರ) ಬಹುಮಾನ ಪಡೆದಿವೆ ಎಂದು ಸ್ತಬ್ಧಚಿತ್ರ ಉಪಸಮಿತಿ ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.