ADVERTISEMENT

Mahisha Dasara | ಮೈಸೂರು: ಪೊಲೀಸ್ ಭದ್ರತೆಯಲ್ಲಿ ಮಹಿಷ ದಸರಾ, ನಿಷೇಧಾಜ್ಞೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 5:13 IST
Last Updated 13 ಅಕ್ಟೋಬರ್ 2023, 5:13 IST
<div class="paragraphs"><p>ಮಹಿಷ ದಸರಾ</p></div>

ಮಹಿಷ ದಸರಾ

   

ಮೈಸೂರು: ಇಲ್ಲಿನ ಪುರಭವನದ ಆವರಣದಲ್ಲಿ ಮಹಿಷ ದಸರಾ ಕಾರ್ಯಕ್ರಮ ಪೊಲೀಸ್ ಭದ್ರತೆಯಲ್ಲಿ ಆರಂಭವಾಗಿದೆ.

ಮಹಿಷ ದಸರಾ ಆಚರಣೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದಾಗಿ, ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪುರಭವನದ ಆವರಣದಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪೊಲೀಸರು ಅವಕಾಶ ನೀಡಿದ್ದಾರೆ.

ADVERTISEMENT

ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ...

ಚಾಮುಂಡಿಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು, ಮೆರವಣಿಗೆ ನಡೆಸಲು ಅವಕಾಶವನ್ನು ನೀಡಿಲ್ಲ. ಚಾಮುಂಡಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಇತ್ತ ಪುರಭವನದ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ನೀಲಿ ಪಟ್ಟಿ ಧರಿಸಿಕೊಂಡು ಅವರು‌ ಭಾಗವಹಿಸಿದ್ದಾರೆ. ಜೈ ಭೀಮ್ ಘೋಷಣೆಗಳು ಮೊಳಗುತ್ತಿವೆ. ಮಹಿಷಾಸುರನಿಗೂ ಜೈಕಾರ ಮೊಳಗುತ್ತಿವೆ. ಮೈಸೂರಿನ ಅಸ್ಮಿತೆಗಾಗಿ ಮಹಿಷ ದಸರಾ ಎಂಬ ಫಲಕವನ್ನೂ ಹಾಕಲಾಗಿದೆ.

ಮಹಿಷಾಸುರನಿಗೆ ಪುಷ್ಪಾರ್ಚನೆ ಹಾಗೂ ದಮ್ಮದೀಕ್ಷೆ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗಿದೆ. ಬುದ್ಧ, ಬಸವ ಹಾಗೂ ಮಹಿಷಾಸುರನ ಚಿಕ್ಕ ಪ್ರತಿಮೆಗಳಿಗೆ ಪುಷ್ಪಾರ್ಚನೆ ನೆರವೇರಲಿದೆ.

ಮುಂಜಾಗ್ರತಾ ಕ್ರಮವಾಗಿ ಪುರಭವನದ ಸುತ್ತಲೂ ಪೊಲೀಸ್ ಪಹರೆ ಹಾಕಲಾಗಿದೆ.

ಮಹಿಷ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವವರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.