ಎಚ್.ಡಿ.ಕೋಟೆ: ತಾಲ್ಲೂಕಿನ ದಮ್ಮನಕಟ್ಟೆ ಹಾಗೂ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಗುರುವಾರ ಸಫಾರಿ ವೇಳೆ, 9 ಹುಲಿಗಳು ಕಾಣಿಸಿಕೊಂಡು ಪ್ರವಾಸಿಗರಲ್ಲಿ ಅಚ್ಚರಿ ಮೂಡಿಸಿದವು. ಇದೇ ಪ್ರದೇಶದಲ್ಲಿ ಜೂನ್ 6ರಂದು ಕಪ್ಪು ಚಿರತೆ ಹಾಗೂ 7ರಂದು ಬಿಳಿ ಜಿಂಕೆ ಕಾಣಿಸಿಕೊಂಡಿತ್ತು.
ಮಗ್ಗೆ ಫಿಮೇಲ್ ಹೆಸರಿನಿಂದ ಖ್ಯಾತಿಯಾದ ಹೆಣ್ಣು ಹುಲಿಯು ತನ್ನ ಎರಡು ಮರಿಗಳೊಂದಿಗೆ ಚಿನ್ನಾಟವಾಡುತ್ತಾ ನಡೆದುಕೊಂಡು ಹೋಗುವುದನ್ನು ಕಂಡ ಪ್ರವಾಸಿಗರು ಹೆಚ್ಚು ಖುಷಿ ಪಟ್ಟರು. ಈ ಅರಣ್ಯ ಪ್ರದೇಶವು ರಾಜ್ಯದಲ್ಲಿಯೇ ಅತಿ ಹೆಚ್ಚು ಹುಲಿಗಳು ಕಾಣಿಸಿಕೊಳ್ಳುವ ಕೇಂದ್ರವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರು ಮುಗಿಬೀಳುತ್ತಿದ್ದಾರೆ.
ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಮೂರು ಬಸ್‌ಗಳಷ್ಟೇ ಸಫಾರಿಗೆ ತೆರಳುತ್ತಿದ್ದು, ಹೆಚ್ಚಿನ ಪ್ರವಾಸಿಗರು ಟಿಕೆಟ್ ಸಿಗದೆ ಬೇಸರದಿಂದ ವಾಪಸ್ಸಾಗುತ್ತಿದ್ದಾರೆ.
‘ಪ್ರವಾಸಿಗರಿಗಾಗಿ ಸಫಾರಿ ಬಸ್‌ಗಳನ್ನು ಹೆಚ್ಚಿಸಬೇಕು’ ಎಂದು ವನ್ಯಜೀವಿ ಛಾಯಾಗ್ರಾಹಕ ಫೋಕಸ್ ರಾಘು ಒತ್ತಾಯಿಸಿದ್ದಾರೆ.
ಹುಲಿಗಳ ಓಡಾಟದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.