ADVERTISEMENT

ಪಿರಿಯಾಪಟ್ಟಣ | ಮನೆಗೆ ನುಗ್ಗಿದ ನೀರು; ಜನರ ಪರದಾಟ

ಪಿರಿಯಾಪಟ್ಟಣ: ಧಾರಾಕಾರ ಮಳೆ; ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 18 ಮೇ 2024, 15:34 IST
Last Updated 18 ಮೇ 2024, 15:34 IST
ಪಿರಿಯಾಪಟ್ಟಣ ತಾಲ್ಲೂಕಿನ ಬೋರೆಹೊಸಹಳ್ಳಿ ರೈತರ ಜಮೀನಿನಲ್ಲಿ ಮಳೆ ನೀರು ನಿಂತಿರುವುದು
ಪಿರಿಯಾಪಟ್ಟಣ ತಾಲ್ಲೂಕಿನ ಬೋರೆಹೊಸಹಳ್ಳಿ ರೈತರ ಜಮೀನಿನಲ್ಲಿ ಮಳೆ ನೀರು ನಿಂತಿರುವುದು   

ಪಿರಿಯಾಪಟ್ಟಣ: ತಾಲ್ಲೂಕಿನ ಬೋರೆಹೊಸಹಳ್ಳಿ ವ್ಯಾಪ್ತಿಯಲ್ಲಿ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ರೈತರ ಜಮೀನುಗಳಲ್ಲಿ ನೀರು ನಿಂತು ಕೆರೆಯಂತಾಗಿ ನಾಟಿ ಮಾಡಿದ ಬೆಳೆ ನಾಶವಾಗಿದೆ.

ಗ್ರಾಮದ ರೈತರಾದ ಕಿರಣ್, ಶ್ರೀನಿವಾಸ್, ಬಿ.ಎಚ್.ಕುಮಾರ್, ಬಿ.ಕೆ.ಸ್ವಾಮಿ ಸೇರಿದಂತೆ ಹಲವಾರು ರೈತರು ಬೇಸಾಯ ಮಾಡಿದ ಬೆಳೆಗಳೆಲ್ಲ ನೀರುಪಾಲಾಗಿವೆ.

‘ಬರಗಾಲದ ನಡೆಯೂ ಸಾಲ ಮಾಡಿ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವ್ಯವಸಾಯ ಮಾಡಿದ್ದೇವೆ. ಆದರೆ ಒಂದೇ ಸಮನೆ ಮಳೆ ತೀವ್ರತೆ ಹೆಚ್ಚಾದ ಪರಿಣಾಮ ಈ ಸಮಸ್ಯೆ ಉಂಟಾಗಿದೆ. ಬೆಳದ ತಂಬಾಕು, ಶುಂಠಿ ಸೇರಿದಂತೆ ಇನ್ನಿತರೆ ಬೆಳೆಗಳು ಮಳೆಯಿಂದ ಹಾನಿಯಾದ ಪರಿಣಾಮ ಸರ್ಕಾರ ನಮಗೆ ಪರಿಹಾರ ನೀಡಬೇಕು’  ಎಂದು ರೈತರು ಮನವಿ ಮಾಡಿದ್ದಾರೆ.

ADVERTISEMENT

ಮನೆಗಳಿಗೆ ನುಗ್ಗಿದ ಮಳೆ ನೀರು: ಪಟ್ಟಣದಲ್ಲಿ ಶುಕ್ರವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆಗೆ ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ ಮಳೆ ನೀರು ಭಾರಿ ಪ್ರಮಾಣದಲ್ಲಿ ಅನಾಹುತ ಸೃಷ್ಟಿಸಿದೆ.

ಪಟ್ಟಣದ ರುದ್ರಪ್ಪ ಬಡಾವಣೆ, ಶಿವಪ್ಪ ಬಡಾವಣೆ, ಛತ್ರದ ಬೀದಿ ಸೇರಿದಂತೆ ಅನೇಕ ತಗ್ಗು ಪ್ರದೇಶದ ಮನೆಗಳಿಗೆ ಭಾರಿ ಪ್ರಮಾಣದ ಮಳೆ ನೀರು ನುಗ್ಗಿ ಪಾತ್ರೆ ಹಾಗೂ ವಸ್ತುಗಳು ಕೊಚ್ಚಿ ಹೋಗಿವೆ. ಛತ್ರದ ಬೀದಿಯಲ್ಲಿರುವ ರಾಮಕೃಷ್ಣ ಎಂಬುವರ ಮನೆಗೆ ನುಗ್ಗಿದ ಮಳೆ ನೀರು ಸಿಲಿಂಡರ್ ಸೇರಿದಂತೆ ಪಾತ್ರೆಗಳು ಕೊಚ್ಚಿಕೊಂಡು ಹೋಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ.

‘ಛತ್ರದ ಬೀದಿಯಲ್ಲಿರುವ ಕುಂಬಾರಕಟ್ಟೆಯಲ್ಲಿ ಪ್ರತಿ ವರ್ಷ ಮಳೆ ನೀರು ಹರಿದು ಅಕ್ಕಪಕ್ಕದ ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಹಾನಿಯಾಗುತ್ತಿದ್ದರೂ ಇದರ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ, ಯಾರೂ ಗಮನ ಹರಿಸುತ್ತಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಜೀವ ಹಾನಿಯಾದರೆ ಯಾರು ಹೊಣೆ’ ಎಂದು ಇಲ್ಲಿನ ನಿವಾಸಿ ಪುಟ್ಟರಾಜು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಿರಿಯಾಪಟ್ಟಣದ ಶಿವಪ್ಪ ಬಡಾವಣೆಯ ತಗ್ಗು ಪ್ರದೇಶದ ಮನೆಯೊಂದಕ್ಕೆ ಶುಕ್ರವಾರ ರಾತ್ರಿ ಬಿದ್ದ ಮಳೆ ನೀರು ನುಗ್ಗಿರುವುದು

Highlights - ಶುಕ್ರವಾರ ಸಂಜೆ ಮತ್ತು ರಾತ್ರಿ ಸುರಿದ ಭಾರಿ ಮಳೆ ಸಿಲಿಂಡರ್ ಸೇರಿದಂತೆ ಪಾತ್ರೆಗಳು ಕೊಚ್ಚಿಕೊಂಡು ಹೋಗಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.