ಮೈಸೂರು: ಸಂಧ್ಯಾ ಸುರಕ್ಷಾ ಟ್ರಸ್ಟ್, ಪಾರಿಜಾತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಭಾನುವಾರ ದೇವಯ್ಯನಹುಂಡಿ ಮುಖ್ಯ ರಸ್ತೆಯ ಸಂಧ್ಯಾಚೇತನ ಭವನದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 12 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮೈಸೂರಿನ ಜ್ಯೋತಿಷಿಗಳಾದ ಶ್ರೀಕಾಂತ್ ತೇಜ, ಎಂ. ಕೀರ್ತಿ, ಅತ್ತಿಬೆಲೆಯ ಪುರೋಹಿತ ಅಶ್ವತ್ಥ ದೀಕ್ಷಿತ್, ಶರತ್ ಶಾಸ್ತ್ರಿ, ಕೌಶಲ ಅಭಿವೃದ್ಧಿ ತರಬೇತುದಾರ ರವಿಶಂಕರ್, ವೀರಗಾಸೆ ಕಲಾವಿದ ಜಯಕುಮಾರ್, ಬೆಂಗಳೂರಿನ ಸಂಸ್ಕೃತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಜೀತೇಂದ್ರ, ಆಯುರ್ವೇದ ವೈದ್ಯರಾದ ಶಾಂಭವಿ ಶ್ರೀಕಾಂತ್, ಕೃತಿಕಾ, ಕಲಸಿಂದ ಗ್ರಾಮದ ಸಮಾಜಸೇವಕಿ ಕಾವ್ಯಾ ವಿ. ಸ್ವಾಮಿ, ಸಮಾಜಸೇವಕ ಪ್ರದೀಪ್ ಕೃಷ್ಣೇಗೌಡ, ಬಾಲ ಸಾಧಕ ಪೂರ್ಣಚೇತನ ಶಾಲೆಯ ವಿದ್ಯಾರ್ಥಿ ಪ್ರಥು ಪಿ. ಅದ್ವೈತ್ ಅವರನ್ನು ಪುರಸ್ಕರಿಲಾಯಿತು.
ಮೇಲುಕೋಟೆ ವಂಗೀಪುರ ನಂಬಿಮಠದ ಪೀಠಾಧಿಪತಿ ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಧ್ಯಾ ಸುರಕ್ಷಾ ಟ್ರಸ್ಟ್ ಗೌರವಾಧ್ಯಕ್ಷ ಕೆ. ರಘುರಾಂ ವಾಜಪೇಯಿ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಸುಜನಾ ಕಾನ್ವೆಂಟ್‌ನ ಪ್ರಾಂಶುಪಾಲೆ ದಿವ್ಯಾ ಲೋಕೇಶ್, ಕಾರ್ಯದರ್ಶಿ ಲೋಕೇಶ್, ಪತ್ರಕರ್ತರಾದ ಅಂಶಿ ಪ್ರಸನ್ನಕುಮಾರ್, ಜೆ.ಎಚ್. ಅನಿಲ್ ಕುಮಾರ್, ವಿಪ್ರ ಮುಖಂಡರಾದ ಬಿ.ವಿ. ಶೇಷಾದ್ರಿ, ಲಕ್ಷ್ಮೀಕಾಂತ್, ರಘುನಾಥ್ ಮುಖ್ಯಅತಿಥಿಗಳಾಗಿದ್ದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಬಿ.ಆರ್. ನಟರಾಜ ಜೋಯಿಸ್, ಪಾರಿಜಾತ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷೆ ಎಸ್. ಉಷಾ, ಎಂ.ಎನ್. ಪಾಂಡುರಂಗ, ಕೆ.ಆರ್. ಸ್ವಾಮಿ, ವಿಶ್ವನಾಥ್ ದೀಕ್ಷಿತ್ ಇದ್ದರು.
ಇದಕ್ಕೂ ಮುನ್ನ, ದೇವಯ್ಯನಹುಂಡಿ ಮುಖ್ಯ ರಸ್ತೆಯ ಶಾಕಂಭರಿ ಧಾರ್ಮಿಕ ಕೇಂದ್ರದ ಎದುರಿನ ಭಾರತಮಾತಾ ಧ್ವಜಕಟ್ಟೆಯಲ್ಲಿ ಬ್ರಾಹ್ಮಣ ಮಹಾಸಭಾ ಮಾಜಿ ಉಪಾಧ್ಯಕ್ಷ ಲಕ್ಷ್ಮೀಕಾಂತ್ ಕನ್ನಡ ಧ್ವಜಾರೋಹಣ ನೆರವೇರಿಸಿದರು. ರಘುನಾಥ್, ನಟರಾಜ್ ಜೋಯಿಸ್, ರಘುರಾಂ ವಾಜಪೇಯಿ, ಇಳೈ ಆಳ್ವಾರ್ ಸ್ವಾಮೀಜಿ, ವಿಕ್ರಾಂತ್ ಪಿ. ದೇವೇಗೌಡ, ಸತ್ಯನಾರಾಯಣ, ಶ್ರೀಕಾಂತ್ ಕಶ್ಯಪ್, ಪುನೀತ್ ಜಿ. ಕೂಡ್ಲೂರು, ಮಂಗಳಾ ಜೋಯಿಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.