ADVERTISEMENT

ಮೈಸೂರು: ಝೂನಲ್ಲಿ ವಿವಿಧ ಉಪಕ್ರಮ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 16:06 IST
Last Updated 14 ಜೂನ್ 2024, 16:06 IST
ಈಶ್ವರ ಬಿ. ಖಂಡ್ರೆ
ಈಶ್ವರ ಬಿ. ಖಂಡ್ರೆ   

ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯದಲ್ಲಿ ವೀಕ್ಷಕರು ಹಾಗೂ ಪ್ರಾಣಿಗಳ ಅನುಕೂಲಕ್ಕಾಗಿ ಪರಿಚಯಿಸಿರುವ ನವೀನ ಉಪಕ್ರಮಗಳಿಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಜೂನ್‌ 15ರಂದು ಮಧ್ಯಾಹ್ನ 3ಕ್ಕೆ ಚಾಲನೆ ನೀಡಲಿದ್ದಾರೆ.

ಅಧಿಕೃತ ವಾಟ್ಸ್‌ಆ್ಯಪ್ ಟಿಕೆಟ್ ಸೌಲಭ್ಯ, ಹೊಸದಾಗಿ ನಾಲ್ಕು ವರ್ಗದಲ್ಲಿ ಪ್ರಾಣಿ ದತ್ತು ಸ್ವೀಕಾರ ಯೋಜನೆಯ ಪರಿಚಯ, ವಿಸ್ತೃತ ಲೈವ್‍ಫೀಡ್ ಘಟಕದ ನಿರ್ಮಾಣ, ಕೆ.ಎಸ್.ಡಿ.ಎಲ್. ಸಂಸ್ಥೆಯು ಸಿ.ಎಸ್.ಆರ್. ಯೋಜನೆಯಡಿ ಕೊಡುಗೆ ಕೊಟ್ಟಿರುವ ಬೊಲೆರೂ ವಾಹನ ಹಾಗೂ ಇದೇ ಮೊದಲಿಗೆ ಪರಿಚಯಿಸುತ್ತಿರುವ ಮೃಗಾಲಯದ ವನ್ಯಜೀವಿ ಆಂಬುಲೆನ್ಸ್ ವಾಹನಗಳ ಸೇವೆಗೆ ಚಾಲನೆ ನೀಡಲಿದ್ದಾರೆ.‌

ಮೃಗಾಲಯದಲ್ಲಿ ಈಚೆಗೆ ಜನಿಸಿರುವ ಗಂಡು ಜಿರಾಫೆ ಮರಿಗೆ ಹೆಸರಿಡಲಿದ್ದಾರೆ. ಬಳಿಕ ಸಚಿವರು ಕೂರ್ಗಳ್ಳಿ ಕೇಂದ್ರದಲ್ಲಿರುವ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷರ ಕಚೇರಿಗೆ ಭೇಟಿ ನೀಡಿ ಅಲ್ಲಿನ ಪಶುವೈದ್ಯ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಲಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್‌ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.