ADVERTISEMENT

ಬೆಲ್ಟ್ ಕುಸ್ತಿ: ರಾಷ್ಟ್ರಮಟ್ಟಕ್ಕೆ ಧನುಶ್ರೀ ಆಯ್ಕೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 13:12 IST
Last Updated 19 ಅಕ್ಟೋಬರ್ 2024, 13:12 IST
ಜಿ.ಎಂ.ಧನುಶ್ರೀ
ಜಿ.ಎಂ.ಧನುಶ್ರೀ   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿಯ ಬಿ.ಜಿ.ಎಸ್‌ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿನಿ ಜಿ.ಎಂ.ಧನುಶ್ರೀ ಬೆಲ್ಟ್ ಕುಸ್ತಿಯ 50 ಕೆ.ಜಿ. ವಿಭಾಗದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕಿನ ಅಗಲಗುರ್ಕಿಯ ಬಿ.ಜಿ.ಎಸ್ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ, ಜಿ.ಪಂ ವತಿಯಿಂದ ಬುಧವಾರ ನಡೆದ ರಾಜ್ಯ ಮಟ್ಟದ ಬೆಲ್ಟ್ ಕುಸ್ತಿ ಪಂದ್ಯಾವಳಿಯ 50 ಕೆ.ಜಿ.ವಿಭಾಗದಲ್ಲಿ ಫೈನಲ್ ಪಂದ್ಯದಲ್ಲಿ ಜಿ.ಎಂ.ಧನುಶ್ರೀ ಬೆಂಗಳೂರು ಉತ್ತರ ಜಿಲ್ಲೆಯ ಸ್ಪರ್ಧಿಯನ್ನು ಮಣಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ 45 ಕೆ.ಜಿ ವಿಭಾಗದಲ್ಲಿ ಸಿ.ಕೆ.ಗಿರೀಶ್ ತೃತೀಯ ಬಹುಮಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳನ್ನು ಮತ್ತು ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕ ಟಿ.ಎಸ್.ವೆಂಕಟೇಶ ಅವರನ್ನು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಎ‌.ಟಿ.ಶಿವರಾಮು, ಪ್ರಾಂಶುಪಾಲೆ ಆರ್.ವಿಜಯಲಕ್ಷ್ಮೀ ಮತ್ತು ಕಾಲೇಜಿನ ಉಪನ್ಯಾಸಕರು  ಅಭಿನಂದಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.