ADVERTISEMENT

ನವನಗರ ಬ್ಯಾಂಕ್‌ಗೆ ₹ 3 ಕೋಟಿ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2024, 15:38 IST
Last Updated 15 ಸೆಪ್ಟೆಂಬರ್ 2024, 15:38 IST
ಕೆ.ಆರ್.ನಗರದಲ್ಲಿ ಭಾನುವಾರ ನಡೆದ ನವನಗರ ಅರ್ಬನ್ ಕೋಆಪರೆಟಿವ್ ಬ್ಯಾಂಕಿನ 27ನೇ ವಾರ್ಷಿಕ ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು. ಸರೋಜಾ ನಾರಾಯಣ, ಕೇಶವ್, ವೈ.ಎಸ್.ಕುಮಾರ್, ಅಪ್ಸರಬಾಬು ಭಾಗವಹಿಸಿದ್ದರು
ಕೆ.ಆರ್.ನಗರದಲ್ಲಿ ಭಾನುವಾರ ನಡೆದ ನವನಗರ ಅರ್ಬನ್ ಕೋಆಪರೆಟಿವ್ ಬ್ಯಾಂಕಿನ 27ನೇ ವಾರ್ಷಿಕ ಸಭೆಯಲ್ಲಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಮಾತನಾಡಿದರು. ಸರೋಜಾ ನಾರಾಯಣ, ಕೇಶವ್, ವೈ.ಎಸ್.ಕುಮಾರ್, ಅಪ್ಸರಬಾಬು ಭಾಗವಹಿಸಿದ್ದರು   

ಕೆ.ಆರ್.ನಗರ: ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ 2023-24ನೇ ಸಾಲಿನಲ್ಲಿ ₹3.01ಕೋಟಿ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್ ಹೇಳಿದರು. ಭಾನುವಾರ ನಡೆದ ಬ್ಯಾಂಕಿನ 27ನೇ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು. ನಿವ್ವಳ ಎನ್‌ಪಿಎ ಶೇ 4.85 ಇದೆ ಎಂದು ತಿಳಿಸಿದರು.

2023-24ನೇ ಸಾಲಿಗೆ 4,637 ಸದಸ್ಯರಿದ್ದು, ಅವರಿಂದ ಒಟ್ಟು ₹ 12.24 ಕೋಟಿ ಷೇರು ಬಂಡವಾಳ ಕ್ರೂಢೀಕರಿಸಲಾಗಿದೆ. ರಿಸರ್ವ್‌ ಫಂಡ್ ₹ 46.2 ಕೋಟಿ ಇದ್ದು, ಇದು ಬ್ಯಾಂಕಿನ ಆರ್ಥಿಕ ಭದ್ರತೆಗೆ ಅತ್ಯಮೂಲ್ಯವಾಗಿದೆ. ಅಲ್ಪಾವಧಿ ಸಾಲ ₹ 61.03 ಕೋಟಿ, ಮಧ್ಯಮಾವಧಿ ಸಾಲ ₹ 103.95 ಕೋಟಿ, ದೀರ್ಘಾವಧಿ ಸಾಲ ₹ 116.47 ಕೋಟಿ ವಿತರಣೆ ಮಾಡಲಾಗಿದೆ. ₹ 2,814.46ಕೋಟಿ ಬ್ಯಾಂಕಿಗೆ ಸಾಲ ಬರಬೇಕಾಗಿದ್ದು, ಇದರಲ್ಲಿ ₹ 37.39 ಕೋಟಿ ಅನುತ್ಪಾದಕವಾಗಿದೆ ಎಂದು ಹೇಳಿದರು.

2024-25ನೇ ಸಾಲಿಗೆ ₹ 5 ಕೋಟಿ ನಿವ್ವಳ ಲಾಭ ಗಳಿಸುವ ವಿಶ್ವಾಸ ಹೊಂದಿದ್ದು, ರಜತ ಮಹೋತ್ಸವದ ನೆನಪಿಗಾಗಿ ಪಿರಿಯಾಪಟ್ಟಣದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಶೀಘ್ರವೇ 4ನೇ ಎಟಿಎಂ ಸೇವೆ ಪ್ರಾರಂಭಿಸಲಾಗುತ್ತದೆ. ಯುಪಿಐ ಆ್ಯಪ್ ಮೂಲಕ ಹಣ ವರ್ಗಾವಣೆ, ಮೊಬೈಲ್ ಬ್ಯಾಂಕಿಂಗ್ ಸೇವೆ ಈಗಾಗಲೇ ಒದಗಿಸಲಾಗಿದೆ ಎಂದು ಹೇಳಿದರು.

ADVERTISEMENT

ಇದೇ ಸಂದರ್ಭದಲ್ಲಿ ಹೆಚ್ಚು ಅಂಕ ಪಡೆದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಉಪಾಧ್ಯಕ್ಷೆ ಸರೋಜಾ ನಾರಾಯಣ, ನಿರ್ದೇಶಕರಾದ ಕೇಶವ್, ವೈ.ಎಸ್.ಕುಮಾರ್, ಅಪ್ಸರಬಾಬು, ಎಸ್.ಮಹದೇವಯ್ಯ, ಎ.ಚಂದ್ರಶೇಖರ್, ಚಂದ್ರಕುಮಾರ್, ಕೆ.ಎನ್.ರಮೇಶ್ ರಾವ್, ಸುಬ್ಬನಾಯಕ, ವ್ಯವಸ್ಥಾಪಕ ನಿರ್ದೇಶಕ ಸಿ.ಸುರೇಶ್, ವ್ಯವಸ್ಥಾಪಕ ಮಂಡಳಿ ಸದಸ್ಯರಾದ ಎಸ್.ಎಸ್.ವಿಶ್ವನಾಥ, ವಿ.ಶ್ರೀನಿವಾಸಮೂರ್ತಿ, ಹಿರಿಯ ವ್ಯವಸ್ಥಾಪಕ ಎಚ್.ವಿ.ಚನ್ನಕೇಶವ, ಶಾಖಾ ವ್ಯವಸ್ಥಾಪಕರಾದ ಮಂಚನಾಯಕ, ಎ.ವಿ.ಮಂಜುನಾಥ್, ಕೆ.ಎಸ್.ಪ್ರಮೋದ್, ಎಂ.ಪಿ.ಸುಹಾಸ್, ಬ್ಯಾಂಕ್ ಸಿಬ್ಬಂದಿ ಮತ್ತು ಷೇರುದಾರರು ಭಾಗವಹಿಸಿದ್ದರು.

Quote - ಕಳೆದ ಬಾರಿಗಿಂತ ಈ ಬಾರಿ ದುಡಿಯುವ ಬಂಡವಾಳ ಶೇ 12.30ರಷ್ಟು ವೃದ್ಧಿಸಿದ್ದರಿಂದ ಪ್ರಸಕ್ತ ಸಾಲಿನಲ್ಲಿ ದುಡಿಯುವ ಬಂಡವಾಳ ₹ 446.67 ಕೋಟಿಗೆ ಏರಿಕೆಯಾಗಿದೆ ಕೆ.ಎನ್.ಬಸಂತ್ ನವನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.