ಮೈಸೂರು: ‘ಓಣಂ ಹಬ್ಬದ ಆಚರಣೆಯ ಮೂಲಕ ಸಮಾಜವನ್ನು ಬೆಸೆಯುವ ಕೆಲಸ ನಡೆಯುತ್ತಿದೆ’ ಎಂದು ಕಾಮಾಕ್ಷಿ ಆಸ್ಪತ್ರೆಯ ವ್ಯವಸ್ಥಾಪಕ ಟ್ರಸ್ಟಿ ಮಹೇಶ್ ಶೆಣೈ ಹೇಳಿದರು.
ಕುವೆಂಪು ನಗರದಲ್ಲಿರುವ ಕಾಮಾಕ್ಷಿ ಆಸ್ಪತ್ರೆ ಆವರಣದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಹೂಗಳಿಂದ ಆಕರ್ಷಕ ರಂಗೋಲಿ ಬಿಡಿಸಿ ಗುರುವಾರ ಆಚರಿಸಿದ ಓಣಂ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಶಿಕ್ಷಣ ಕ್ಷೇತ್ರದಲ್ಲಿ ದೇಶದಲ್ಲೇ ಮೊದಲ ಸ್ಥಾನದಲ್ಲಿರುವುದು ಕೇರಳ ರಾಜ್ಯಕ್ಕೆ ಹೆಮ್ಮೆಯ ವಿಚಾರ. ಕೇರಳದವರು ಪ್ರಪಂಚದ ಯಾವುದೇ ಮೂಲೆಯಲ್ಲೂ ಕಾಣಸಿಗುತ್ತಾರೆ. ಧಾರ್ಮಿಕ, ದೇವಾಲಯಗಳ ನಾಡು ಕೂಡ ಹೌದು’ ಎಂದರು.
ಓಣಂ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ನಾನಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಆಸ್ಪತ್ರೆಯ ಅಶೋಕ್ ಶೆಣೈ, ಡಾ.ರೂಪಾ ಪ್ರಕಾಶ್, ಡಾ.ಉಮೇಶ್ ಕಾಮತ್, ಡಾ.ಪ್ರಸನ್ನಕುಮಾರ್, ಡಾ.ವಿಜಯ್ ಕುಮಾರ್, ಡಾ.ಪುಷ್ಪಲತಾ, ಡಾ.ಧನ್ಯ, ಡಾ.ಜನಾರ್ಧನ್, ಡಾ.ರವಿಕುಮಾರ್, ಡಾ.ನಳಿನಿ, ಡಾ.ಶ್ರುತಿ, ಡಾ.ದಿವ್ಯಾ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.