ಮೈಸೂರು: ಚಾಮರಾಜ ಕ್ಷೇತ್ರದ ಎಸ್‌ಯುಸಿಐಸಿ ಪಕ್ಷದ ಅಭ್ಯರ್ಥಿ ಸೀಮಾ ಜಿ.ಎಸ್. ಅವರು ಬಿ.ಎಸ್ಸಿ. ಎಲ್‌ಎಲ್‌ಬಿ ಪದವೀಧರೆ. ಜನ ಚಳವಳಿಗಳಲ್ಲಿ ಅವರು ತೊಡಗಿದ್ದಾರೆ.
ಎಐಡಿಎಸ್‌ಒ ಸಂಘಟನೆಯ ಮೂಲಕ ಹಲವು ವರ್ಷ ವಿದ್ಯಾರ್ಥಿ ಹೋರಾಟದಲ್ಲಿ ನಾಯಕತ್ವ ವಹಿಸಿದ್ದರು. ಬಳಿಕ, ಎಐಎಂಎಸ್‌ಎಸ್ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಮಹಿಳೆಯರ ಹಕ್ಕುಗಳಿಗಾಗಿ ದನಿ ಎತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ಸಂಘದ ಮೈಸೂರು ನಗರ ಘಟಕದ ಅಧ್ಯಕ್ಷರೂ ಹೌದು. ಎಸ್‌ಯುಸಿಐಸಿ ಜಿಲ್ಲಾ ಸಮಿತಿಯ ಸದಸ್ಯರೂ ಹೌದು.
ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಅವರು, ತಮ್ಮ ಕೈಯಲ್ಲಿ ₹ 5ಸಾವಿರ ನಗದು ಇದೆ ಎಂದು ತಿಳಿಸಿದ್ದಾರೆ. ₹ 1 ಲಕ್ಷ ಮೌಲ್ಯದ ಚಿನ್ನಾಭರಣವಿದೆ. ಪಕ್ಷದ ಪೂರ್ಣಾವಧಿ ಕಾರ್ಯಕರ್ತೆಯಾಗಿರುವ ತಮಗೆ ಪಕ್ಷದ ಸಹಾಯವೇ ಆದಾಯದ ಮೂಲ ಎಂದು ತಿಳಿಸಿದ್ದಾರೆ. ಪತಿ ರವಿ ಬಿ. ಅವರ ಆದಾಯದ ಮೂಲವೂ ‘ಪಕ್ಷದ ಸಹಾಯದಿಂದ’ ಎಂದು ನಮೂದಿಸಿದ್ದಾರೆ. ಒಟ್ಟು ₹ 1.39 ಲಕ್ಷ ಚರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಇಲ್ಲ; ಸಾಲವೂ ಇಲ್ಲ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.