ಮೈಸೂರು: ತಮ್ಮ 36ನೇ ಚಾತುರ್ಮಾಸ್ಯ ಸಂಪನ್ನಗೊಳಿಸಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಇಲ್ಲಿನ ಭಕ್ತರು ಭಾವುಕರಾಗಿ ಬೀಳ್ಕೊಟ್ಟರು.
ಸಂಜೆ ನಂಜನಗೂಡಿಗೆ ತೆರಳಿ ಕಪಿಲಾ ನದಿಗೆ ಹಾಲು, ಅರಿಸಿನ, ಕುಂಕುಮ ಹಾಗೂ ಪುಷ್ಪ ಸಹಿತ ಬಾಗಿನ ಅರ್ಪಿಸಿದ ಶ್ರೀಗಳು ಮಂಗಳಾರತಿ ಬೆಳಗಿದರು. ಬಳಿಕ ಅಲಂಕೃತ ತೆಪ್ಪದಲ್ಲಿ ಕುಳಿತು ನದಿಯ ಮತ್ತೊಂದು ದಡವನ್ನು ತಲುಪಿ ಸೀಮೋಲ್ಲಂಘನ ವಿಧಿಯನ್ನು ಪೊರೈಸಿದರು. ನಂತರ ನಂಜುಂಡೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ನಂಜುಂಡೇಶ್ವರನ ದರ್ಶನ ಪಡೆದರು.
ದೇವಳದ ಅರ್ಚಕರು, ಆಡಳಿತ ಮಂಡಳಿ ಪ್ರಮುಖರು ಶ್ರೀಗಳನ್ನು ಆದರದಿಂದ ಬರಮಾಡಿಕೊಂಡರು. ನಂಜನಗೂಡು ಪಟ್ಟಣದ ರಾಘವೇಂದ್ರ ಮಠಕ್ಕೂ ತೆರಳಿದ ಶ್ರೀಗಳು, ಗುರುರಾಯರ ಮೃತ್ತಿಕಾ ವೃಂದಾವನ ದರ್ಶನ ಪಡೆದರು. ಇದರೊಂದಿಗೆ ಶ್ರೀಗಳ ಈ ಬಾರಿಯ ಚಾತುರ್ಮಾಸ್ಯ ಅಧಿಕೃತವಾಗಿ ಸಮಾಪನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.