ಮೈಸೂರು: ನಗರದ ಸರಸ್ವತಿಪುರಂ ನಿವಾಸಿ ಪತ್ರಕರ್ತ, ಕವಿ 'ಹಾಡುಪಾಡು' ರಾಮು (69) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು.
ಅವಿವಾಹಿತರಾಗಿದ್ದ ಅವರಿಗೆ ಸೋದರ ಟಿ.ಎಸ್.ವೇಣುಗೋಪಾಲ್, ಸೋದರಿ ರಾಜಲಕ್ಷ್ಮಿ ಇದ್ದಾರೆ.
'ಅಗ್ನಿಸೂಕ್ತ', 'ವಿಷ್ಣುಕ್ರಾಂತಿ ಮತ್ತು ಇತರ ಪದ್ಯಗಳು', 'ರಾಮು ಕವಿತೆಗಳು' ಅವರ ಪ್ರಕಟಿತ ಕವನ ಸಂಕಲನಗಳು. 'ರಾಮು ಕವಿತೆಗಳು' ಕೃತಿಯನ್ನು 'ಋತುಮಾನ' ಪ್ರಕಾಶನ ಸಂಸ್ಥೆಯು ಪ್ರಕಟಿಸಿದಾಗ ತಮ್ಮ ಹೆಸರನ್ನು ಉಲ್ಲೇಖಿಸದಂತೆ ಅವರು ಹೇಳಿದ್ದರು.
ಆಂದೋಲನ ಪತ್ರಿಕೆಯ 'ಹಾಡು- ಪಾಡು' ಪುರವಣಿ ಅವರ ನೇತೃತ್ವದಲ್ಲಿ ರೂಪುಗೊಳ್ಳುತ್ತಿತ್ತು. ಅದರಿಂದ 'ಆಂದೋಲನ' ರಾಮು ಎಂದೇ ಅವರನ್ನು ಓದುಗರು ಕರೆಯುತ್ತಿದ್ದರು. ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಬಂದಿತ್ತು.
ಚಿಂತಕ ದೇವನೂರ ಮಹಾದೇವ, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಸೇರಿದಂತೆ ಸಾಹಿತ್ಯ ಲೋಕದ ಹಲವರ ಒಡನಾಡಿಗಳಾಗಿದ್ದರು.
ಮೃತರ ಅಂತ್ಯಕ್ರಿಯೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಧ್ಯಾಹ್ನ 1.30ಕ್ಕೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.