ADVERTISEMENT

ಪೊಲೀಸರಿಗೂ ಸೌಲಭ್ಯಗಳು ಹೆಚ್ಚಲಿ: ನ್ಯಾಯಾಧೀಶ ರವೀಂದ್ರ ಹೆಗಡೆ

ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶ ರವೀಂದ್ರ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:02 IST
Last Updated 21 ಅಕ್ಟೋಬರ್ 2024, 16:02 IST
ಮೈಸೂರಿನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ರವೀಂದ್ರ ಹೆಗಡೆ ಅವರು ಹುತಾತ್ಮರ ಸ್ತಂಭಕ್ಕೆ ಪುಷ್ಪಗುಚ್ಛ ಅರ್ಪಿಸಿದರು- ಪ್ರಜಾವಾಣಿ ಚಿತ್ರ
ಮೈಸೂರಿನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ರವೀಂದ್ರ ಹೆಗಡೆ ಅವರು ಹುತಾತ್ಮರ ಸ್ತಂಭಕ್ಕೆ ಪುಷ್ಪಗುಚ್ಛ ಅರ್ಪಿಸಿದರು- ಪ್ರಜಾವಾಣಿ ಚಿತ್ರ   

ಮೈಸೂರು: ‘ರಾಜ್ಯದಲ್ಲಿ ಪೊಲೀಸ್ ಸಿಬ್ಬಂದಿ ಸಂಖ್ಯೆ ಹೆಚ್ಚಬೇಕು. ಅವರಿಗೂ ಮಾನವ ಹಕ್ಕುಗಳಿದ್ದು, ರಜಾ ದಿನ ಹಾಗೂ ಇನ್ನಿತರ ಸೌಲಭ್ಯ ದೊರಕಲಿ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗಡೆ ತಿಳಿಸಿದರು.

ದಕ್ಷಿಣ ವಲಯ ಡಿಐಜಿ, ಮೈಸೂರು ನಗರ, ಜಿಲ್ಲಾ ಪೊಲೀಸ್, ಕನಾ೯ಟಕ ಪೊಲೀಸ್ ಅಕಾಡೆಮಿ, ಕೆಎಸ್ಆರ್‌ಪಿ ಮತ್ತು ಕೆಎಆರ್‌ಪಿ ಘಟಕಗಳು ನಗರದ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕೆಟ್ಟ ಯೋಚನೆ ಎಲ್ಲರಲ್ಲೂ ಇರುತ್ತದೆ. ಅದನ್ನು ಕಟ್ಟುನಿಟ್ಟಿನಲ್ಲಿ ಇರಿಸಲು ಪೊಲೀಸರು ಅಗತ್ಯ. ಪೊಲೀಸ್ ವ್ಯವಸ್ಥೆ ಇಲ್ಲದಿದ್ದರೆ ಅವ್ಯವಸ್ಥೆ ಆಗುತ್ತಿತ್ತು. ದೇಶಕ್ಕಾಗಿ ಅವರು ಮಾಡುತ್ತಿರುವ ತ್ಯಾಗ ನಿತ್ಯ ಸ್ಮರಿಸಿ ಗೌರವ ನೀಡಬೇಕು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದವರ ಸ್ಮರಣೆ ಅಗತ್ಯ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಪೊಲೀಸರ ಹೋರಾಟದಲ್ಲಿ ನಾಗರಿಕರು ಜೊತೆಯಾಗಬೇಕು’ ಎಂದರು.

ADVERTISEMENT

ಹುತಾತ್ಮರಿಗೆ ನಮನ:

ಹುತಾತ್ಮರ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗಡೆ, ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಮೈಸೂರು ಎಸ್‌ಪಿ ಎನ್.ವಿಷ್ಣುವರ್ಧನ್, ಕೆಪಿಎ ಉಪ ನಿದೇ೯ಶಕ ಚನ್ನಬಸವಣ್ಣ ಲಂಗೋಟಿ, ಡಿಸಿಪಿಗಳಾದ ಎಂ.ಮುತ್ತುರಾಜು, ಎಸ್.ಜಾಹ್ನವಿ, ಗುಪ್ತಚರ ದಳದ ಎಸ್‌ಪಿ ಜಯಪ್ರಕಾಶ್, ಸೆಸ್ಕ್ ಜಾಗೃತದಳ ಎಸ್‌ಪಿ ಸವಿತಾ ಹೂಗಾರ್, ಕೆಎಸ್ಆರ್‌ಪಿ ಕಮಾಂಡೆಂಟ್ ಕೆ.ಬಿ.ದೊರೆಮಣಿ ಭೀಮಯ್ಯ, ಅಶ್ವರೋಹಿ ದಳದ ಕಮಾಂಡೆಂಟ್ ಶೈಲೇಂದ್ರ, ಡಿವೈಎಸ್ಪಿಗಳಾಗ ಕರೀಂ ರಾವುತರ್, ಅನುಷಾ ರಾಣಿ, ಏರ್ ಫೋರ್ಸ್ ಸೆಲೆಕ್ಷನ್ ಬೋರ್ಡ್ ಚೀಫ್ ಅಡ್ಮಿನಿಸ್ಟ್ರೇಟಿವ್ ಬಿಲ್ಲೋರ್ ಹೇಮಂತ್ ಕುಮಾರ್, ಇನ್ ಸ್ಪೆಕ್ಟರ್ ಜಿ.ಎಸ್.ಸ್ವರ್ಣ, ಎಸ್ಐ ಎಂ.ಕೆ.ಸ್ಮಿತಾ ಪೊಲೀಸ್ ಬ್ಯಾಂಡ್ ವಾದ್ಯ ಹಿನ್ನೆಲೆಯಲ್ಲಿ ಸಾಗಿ ಪುಷ್ಪಗುಚ್ಚ ಸಮಪಿ೯ಸಿದರು.

ಪರೇಡ್ ಕಮಾಂಡರ್ ಮಹಾದೇವಸ್ವಾಮಿ ವಂದನೆ ಸಲ್ಲಿಸಿದ ಬಳಿಕ 3 ಸುತ್ತಿನ ವಾಲಿ ಫೈರಿಂಗ್ ನಡೆಸಿ ಹುತಾತ್ಮರಿಗಾಗಿ ಮೌನಾಚರಣೆ ಮಾಡಲಾಯಿತು. ದೇಶ ಮತ್ತು ರಾಜ್ಯದ ಹುತಾತ್ಮರ ಪಟ್ಟಿಯನ್ನು ಎಸ್‌ಪಿ ಎನ್.ವಿಷ್ಣುವರ್ಧನ್ ವಾಚಿಸಿದರು.

ಅಂತಿಮವಾಗಿ ವೀರಪ್ಪನ್ ಕಾಯಾ೯ಚರಣೆಯಲ್ಲಿ ಮಡಿದ ಎಸ್‌ಪಿ ಹರಿಕೃಷ್ಣ ಪುತ್ಥಳಿ ಹಾಗೂ ಸ್ಮಾರಕಕ್ಕೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಹೆಗಡೆ ಹಾಗೂ ಪೊಲೀಸ್ ಅಧಿಕಾರಿಗಳು ಮಾಲಾಪ೯ಣೆ ಮಾಡಿದರು. ಡಿಎಆರ್ ಎಸ್ಐ ಸುನಿಲ್ ಮತ್ತು ಕೆಪಿಎ ಕಾನ್‌ಸ್ಟೇಬಲ್ ನಂದಿನಿ ನಿರೂಪಿಸಿದರು.

ಮೈಸೂರಿನ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಕೆ.ಎಸ್.ಆರ್.ಪಿ ಸಿಬ್ಬಂದಿಗಳು ಮೂರು ಸುತ್ತು ವಾಲಿ ಫೈರಿಂಗ್ ಹಾರಿಸಿದರು. ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.