ADVERTISEMENT

ಮೈಸೂರು | ಅಂಚೆ ರಫ್ತು ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2023, 5:24 IST
Last Updated 8 ಸೆಪ್ಟೆಂಬರ್ 2023, 5:24 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮೈಸೂರು: ನಗರದ ಸರಸ್ವತಿಪುರಂ ಹಾಗೂ ಅಶೋಕ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ರಫ್ತು ಕೇಂದ್ರಗಳನ್ನು ಆರಂಭಿಸಲಾಗಿದೆ.

‘ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಉತ್ತೇಜನ ನೀಡಲು ಮತ್ತು ರಫ್ತು ಉದ್ಯಮವನ್ನು ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಆರಂಭಿಸಲಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮೈಸೂರು ಅಂಚೆ ವಿಭಾಗದ ಹಿರಿಯ ಅಂಚೆ ಸೂಪರಿಂಟೆಂಡೆಂಟ್ ಏಂಜಲ್‌ ರಾಜ್‌ ತಿಳಿಸಿದ್ದಾರೆ.

ADVERTISEMENT

‘ಆನ್‌ಲೈನ್‌ನಲ್ಲಿ ದಾಖಲೆಗಳ ಅಪ್‌ಲೋಡ್, ರಫ್ತು ಪರವಾನಗಿ, ಪ್ರಮಾಣಪತ್ರ, ವಸ್ತು ವಿವರ, ರಫ್ತುದಾರರ ವಿವರ ಮೊದಲಾದವುಗಳನ್ನು ನೀಡಲು ಬೆಂಗಳೂರಿಗೆ ಹೋಗಬೇಕಾಗಿತ್ತು. ಈಗ ರಫ್ತುದಾರರು ಇರುವಲ್ಲೇ ಡಾಕ್‌ ನಿರ್ಯಾತ್‌ ಪೋರ್ಟಲ್‌ನಲ್ಲಿ (https://dnk.cept.gov.in/customers.web) ಭರ್ತಿ ಮಾಡಲು ಅವಕಾಶ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘35 ಕೆ.ಜಿ.ವರೆಗೂ ಒಂದು ಪಾರ್ಸಲ್‌ ಅನ್ನು ವಿದೇಶಗಳಿಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ. ಎಷ್ಟು ಪಾರ್ಸಲ್‌ಗಳನ್ನಾದರೂ ಕಳುಹಿಸಬಹುದು. ಸರಸ್ವತಿಪುರಂ ಹಾಗೂ ಅಶೋಕ ರಸ್ತೆಯಲ್ಲಿರುವ ಪ್ರಧಾನ ಅಂಚೆ ಕಚೇರಿಗಳಿಂದಲೇ ರಫ್ತು ಮಾಡಬಹುದು. ವಸ್ತುಗಳು ಹೆಚ್ಚಿದ್ದರೆ ಇಲಾಖೆಯಿಂದಲೇ ಉಚಿತವಾಗಿ ಪಿಕ್‌ಅಪ್ ಮಾಡುವ ವ್ಯವಸ್ಥೆ ಇದೆ. ರಫ್ತುದಾರರು ಒಮ್ಮೆ ಕೆವೈಸಿ ಅಪ್‌ಲೋಡ್ ಮಾಡಿಸಿದರೆ ಮತ್ತೆ ಮತ್ತೆ ದಾಖಲೆಗಳನ್ನು ಕೊಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗೆ ದೂ.ಸಂ. 0821– 2417308, ಮೊ.ಸಂ. 91089 01005 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.