ಮೈಸೂರು: ‘ಮುಡಾ ಸಾಮಾನ್ಯ ಸಭೆಯನ್ನು ಕಾಟಾಚಾರಕ್ಕೆ ಆಯೋಜಿಸಿದ್ದು, ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುತ್ತಿಲ್ಲ’ ಎಂದು ಆರೋಪಿಸಿ ಮುಡಾದ ನಿವೃತ್ತ ಸಹಾಯಕ ಯೋಜನಾ ನಿರ್ದೇಶಕ ಪಿ.ಎಸ್. ನಟರಾಜು ಅವರು ಕಚೇರಿ ಮುಂಭಾಗ ಕಣ್ಣಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಗುರುವಾರ ಪ್ರತಿಭಟಿಸಿದರು.
‘ಮುಡಾಕ್ಕೆ ಆಡಳಿತ ಮಂಡಳಿಯೇ ಸರ್ವ ಶ್ರೇಷ್ಠ. ಸಾಮಾನ್ಯ ಸಭೆಯಲ್ಲಿ ಮಹತ್ವದ ವಿಷಯಗಳ ಚರ್ಚೆ ನಡೆಯಬೇಕು. ಆದರೆ, ಇಂದಿನ ಸಭೆಯಲ್ಲಿನ 172 ವಿಷಯಗಳ ಪೈಕಿ 167 ಬಡಾವಣೆಗಳ ನಕ್ಷೆ ಅನುಮೋದನೆಗೆ ಸಂಬಂಧಿಸಿದ್ದಾಗಿವೆ’ ಎಂದು ನಟರಾಜು ದೂರಿದರು.
‘ರಾಮಕೃಷ್ಣ ನಗರದಲ್ಲಿ ಬಡಾವಣೆಗೆ ಅನುಮೋದನೆ ಪಡೆಯದೆಯೇ 150ಕ್ಕೂ ಹೆಚ್ಚು ನಿವೇಶನಗಳನ್ನು ಹಂಚಲಾಗಿದೆ. ಈ ಅಕ್ರಮದಲ್ಲಿ ಹಿಂದಿನ ಆಯುಕ್ತರು ಭಾಗಿಯಾಗಿದ್ದು, ಜಿಲ್ಲಾಧಿಕಾರಿ ನೋಟಿಸ್ ಸಹ ನೀಡಿದ್ದಾರೆ. ಹೀಗಿದ್ದೂ ಕ್ರಮ ಆಗಿಲ್ಲ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.