ಮೈಸೂರು: ಚಲನಚಿತ್ರ ನಟ ದಿವಂಗತ ಪುನೀತ್ ರಾಜ್‌ಕುಮಾರ್ ನೆನಪಿನಲ್ಲಿ ದಸರಾ ಸಾಂಸ್ಕೃತಿಕ ಮತ್ತು ಮಹಿಳಾ ಮತ್ತು ಮಕ್ಕಳ ಸಮಿತಿ ವತಿಯಿಂದ ಇಲ್ಲಿನ ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಗಂಧದಗುಡಿ ಚಿತ್ರಕಲಾ ಸ್ಪರ್ಧೆ’ಯಲ್ಲಿ 600 ಮಂದಿ ಪಾಲ್ಗೊಂಡಿದ್ದರು. ಪರಿಸರಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದರು.
8ರಿಂದ 12ವರ್ಷದವರ ವಿಭಾಗದಲ್ಲಿ ಕಮಲಾಕರ್ (ಪ್ರಥಮ), ಅದಿತಿ (ದ್ವಿತೀಯ) ಹಾಗೂ ಸ್ನೇಹಾರ್ಚನ (ತೃತೀಯ), 12ರಿಂದ 18 ವರ್ಷದವರ ವಿಭಾಗದಲ್ಲಿ ಚೇತನ್ (ಪ್ರಥಮ), ವಿಷ್ಣುಪ್ರಸಾದ (ದ್ವಿತೀಯ) ಹಾಗೂ ತ್ರಿಷಾ (ತೃತೀಯ) ಬಹುಮಾನ ಗಳಿಸಿದರು.
18 ವರ್ಷ ಮೇಲಿನವರ ವಿಭಾಗದಲ್ಲಿ ಮಧುಸೂದನ್, ಸಾನಿಕಾ ಹಾಗೂ ಮಧುಸೂದನ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಗಳಿಸಿ ಬಹುಮಾನ ತಮ್ಮದಾಗಿಸಿಕೊಂಡರು. ಪಾಲ್ಗೊಂಡಿದ್ದವರೆಲ್ಲರಿಗೂ ಪ್ರಮಾಣಪತ್ರ ನೀಡಲಾಯಿತು.
ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ‘ಪುನೀತ್ ರಾಜಕುಮಾರ್ ಅವರ ಒಂದೊಂದು ಚಿತ್ರವೂ ಯುವ ಪೀಳಿಗೆಗೆ ಉತ್ತಮ ಸಂದೇಶ ನೀಡಿವೆ. ‘ನಂದಿನಿ’ ಸೇರಿದಂತೆ ಹಲವು ಬ್ರಾಂಡ್‌ಗಳ ರಾಯಭಾರಿಯಾಗಿ ಉಚಿತವಾಗಿ ಕೆಲಸ ಮಾಡಿದ್ದರು. ಅನಾಥಶ್ರಮ, ವೃದ್ಧಾಶ್ರಮಗಳಿಗೆ ಕೊಡುಗೆ ನೀಡಿದ್ದರು’ ಎಂದು ನೆನೆದರು.
ಮುಖಂಡ ಕೆ. ರಘುರಾಂ ವಾಜಪೇಯಿ ಮಾತನಾಡಿದರು. ಕೆ.ಆರ್. ಬ್ಯಾಂಕ್ ನಿರ್ದೇಶಕ ಶಿವಪ್ರಕಾಶ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರಘುರಾಜೇ ಅರಸ್, ಮಹಿಳಾ ಮತ್ತು ಮಕ್ಕಳ ಸಮಿತಿ ಅಧ್ಯಕ್ಷೆ ಶಾರದಾ ಸಂಪತ್, ನಿರೂಪಕ ಅಜಯ್ ಶಾಸ್ತ್ರಿ, ರತನ್ ಚಿಕು, ದೀಕ್ಷಿತ್, ರಂಗಸ್ವಾಮಿ, ಗುರುರಾಜ್, ಪದ್ಮನಾಭ್, ಜಗದೀಶ್, ನಾಗರತ್ನಾ, ಲತಾ, ಗಿರೀಶ್, ಸಚಿನ್ ನಾಯಕ, ನಾಗೇಶ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.