ADVERTISEMENT

ದೇಶದ್ರೋಹಿಗಳು ಬಿಜೆಪಿಯವರು; ದಿಶಾ ರವಿ ಅಲ್ಲ -ಪುಷ್ಪಾ ಅಮರನಾಥ್

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 4:01 IST
Last Updated 16 ಫೆಬ್ರುವರಿ 2021, 4:01 IST
ಪುಷ್ಪಾ ಅಮರನಾಥ್
ಪುಷ್ಪಾ ಅಮರನಾಥ್   

ಮೈಸೂರು: ‘ರೈತರ ಪರವಾಗಿ ಕೆಲಸ ಮಾಡಿದ ಪರಿಸರ ಹೋರಾಟಗಾರ್ತಿ ದಿಶಾ ರವಿ ದೇಶದ್ರೋಹಿ ಅಲ್ಲ. ನಿಜವಾದ ದೇಶದ್ರೋಹಿಗಳು ಬಿಜೆಪಿ ಯವರೇ ಆಗಿದ್ದಾರೆ’ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷರಾದ ಪುಷ್ಪಾ ಅಮರನಾಥ್ ಆರೋಪಿಸಿದರು.

‘ರೈತರ ಪರವಾಗಿ ದನಿ ಎತ್ತಿದರೆ ಸಾಕು ಅವರ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ. ಆದರೆ, ಜನಪರವಾಗಿ ಆಡಳಿತ ಮಾಡಲು ಯೋಗ್ಯತೆ ಇಲ್ಲದ ಬಿಜೆಪಿಯವರು ದೇಶ ದ್ರೋಹಿಗಳು ಅಲ್ಲವೇ’ ಎಂದು ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ದೇಶದಲ್ಲಿ ಕಾರ್ಮಿಕರು, ಕೂಲಿ ಕಾರ್ಮಿಕರು, ಬಡವರು, ರೈತರು, ವಿದ್ಯಾರ್ಥಿಗಳು, ಮಹಿಳೆಯರು ಹೀಗೆ ಯಾರೂ ಸಂತೋಷವಾಗಿಲ್ಲ. ಚಳವಳಿ ಯಲ್ಲಿ ನಿರತರಾದ ರೈತರನ್ನು ಬಲಿ ಪಡೆದ ನಿಮ್ಮನ್ನು ಮೊದಲು ಬಂಧಿಸಬೇಕು’ ಎಂದು ಹರಿಹಾಯ್ದರು.

ADVERTISEMENT

‘ಬೈಕ್, ಫ್ರಿಡ್ಜ್ ಹೊಂದಿದವರಿಂದ ಬಿಪಿಎಲ್ ಪ‍ಡಿತರ ಚೀಟಿ ವಾಪಸ್ ಪಡೆಯುವುದಾಗಿ ಹೇಳಿದ್ದಾರೆ. ಈಗ ಅಡುಗೆ ಅನಿಲ ದರ ಏರಿಸಿ ತೊಂದರೆ ಕೊಡುತ್ತಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.